
ಬೆಂಗಳೂರು: ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಲೇಖಕ, ಲೇಖಕಿಯರಿಂದ ಕಥೆಗಳನ್ನು ಆಹ್ವಾನಿಸಲಾಗಿದೆ.
ಪ್ರಥಮ ಬಹುಮಾನ ₹ 50 ಸಾವಿರ, ದ್ವಿತೀಯ ಬಹುಮಾನ ₹ 25 ಸಾವಿರ ಹಾಗೂ ತೃತೀಯ ಬಹುಮಾನ ₹ 15 ಸಾವಿರ ನೀಡಲಾಗುತ್ತದೆ. ಉಳಿದಂತೆ ಐದು ಕಥೆಗಳಿಗೆ ತಲಾ ₹ 5 ಸಾವಿರ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ 17 ಕಥೆಗಳಿಗೆ ತಲಾ ₹ 2 ಸಾವಿರ ಗೌರವಧನ ನೀಡಲಾಗುವುದು. ಆಯ್ಕೆಯಾದ ಒಟ್ಟು 25 ಕಥೆಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಥೆಯು ಸ್ವತಂತ್ರವಾಗಿರಬೇಕು. ಮೇ 15ರ ಒಳಗೆ ಕಥೆಗಳನ್ನು ಕಳುಹಿಸಬೇಕು. ಜುಲೈ 6ರಂದು ಅಂತಿಮ ಸುತ್ತಿನ 25 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
ಕಥೆಗಳನ್ನು ಇ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) bbks2026@bookbrahma.com ಅಥವಾ ಹಸ್ತಪ್ರತಿಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ ಮೂರನೇ ಮಹಡಿ, ಆರ್.ಕೆ. ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಆವರಣ, ಎಲೆಕ್ಟ್ರಾನಿಕ್ಸ್ ಸಿಟಿ, ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು. ವಿವರಗಳಿಗೆ ಸಂಪರ್ಕಿಸಿ: 8495024253
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.