ADVERTISEMENT

‘ಮಳೆ ನಿಂತ ಮೇಲೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 18:11 IST
Last Updated 25 ಡಿಸೆಂಬರ್ 2020, 18:11 IST
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ, ಬಿ.ವಿ.ವಸಂತಕುಮಾರ್, ಲೇಖಕ ಮಹೇಶ್ ಜೋಷಿ, ಲೇಖಕ ನೇ.ಭ.ರಾಮಲಿಂಗ ಶೆಟ್ಟಿ, ಸ್ನೇಹ ಪುಸ್ತಕ ಪ್ರಕಾಶನದ ಪರಿಶಿವಪ್ಪ, ಕರವೇ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ ಇದ್ದರು.

ಬೆಂಗಳೂರು: ‘ಕವಿ, ಸಾಹಿತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಬರಹಗಳ ಸ್ವರೂಪ ಭಿನ್ನವಾದರೂ, ಜೋಡಿ ಚಕ್ರಗಳಾಗಿ ನಾಡದೇವಿಯ ರಥ ಎಳೆದಿದ್ದಾರೆ. ಅವರಲ್ಲಿ ನಾನೂ ಒಬ್ಬನಾಗಿರುವುದು ನನ್ನ ಸುದೈವ’ಎಂದು ಕವಿ ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯು ಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದಎಚ್.ಎಸ್.ವೆಂಕಟೇಶಮೂರ್ತಿ ಅವರ ಕುರಿತಾಗಿ ಲೇಖಕ ನೇ.ಭ.ರಾಮಲಿಂಗಶೆಟ್ಟಿ ಬರೆದಿರುವ ‘ಮಳೆ ನಿಂತ ಮೇಲೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್,‘ಎಚ್ಎಸ್‌ವಿ ಅವರ ಕುರಿತಾದ ಈ ಕೃತಿ, ಒಂದು ಸಾಂಸ್ಕೃತಿಕ ದಾಖಲೆ. ಕನ್ನಡ ಮತ್ತು ಭಾರತದ ಪರಂಪರೆಯ ಅನುಸಂಧಾನಕ್ಕೆ ಇದು ನೆರವಾಗಲಿದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.