ADVERTISEMENT

ಮುಖ್ಯಮಂತ್ರಿ ಮನೆಯ ಮುಂದೆಯೇ ಜನಸ್ಪಂದನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:36 IST
Last Updated 3 ಆಗಸ್ಟ್ 2019, 19:36 IST
ಬೆಂಗಳೂರಿನ ತಮ್ಮ ಮನೆಯ ಮುಂಭಾಗ ಶನಿವಾರ ಜನರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಬೆಂಗಳೂರಿನ ತಮ್ಮ ಮನೆಯ ಮುಂಭಾಗ ಶನಿವಾರ ಜನರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯ ಮನೆಗೆ ಬಂದ ಅಂಗವಿಕಲರ ಕುಟುಂಬವೊಂದಕ್ಕೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲು ಸೂಚಿಸಿದರು.

ನಾಗೇಶ್ ಎಂಬುವವರು ಕುಟುಂಬದ ಸದಸ್ಯರ ಜೊತೆ ಬಂದಿದ್ದರು.ಮನೆಯಲ್ಲಿ ಇಬ್ಬರು ಅಂಗವಿಕಲರಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

‘ನನಗೊಂದು ಕೆಲಸ ಕೊಟ್ಟರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಮನವಿಯನ್ನು ದಯವಿಟ್ಟು ಸಕಾರಾತ್ಮಕವಾಗಿ ಪರಿಗಣಿಸಿ’ ಎಂದು ನಾಗೇಶ್ ಕೋರಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಯಡಿಯೂರಪ್ಪ , ನಾಗೇಶ್ ಗುತ್ತಿಗೆ ಆಧಾರದ ಮೇಲೆ ವಿಧಾನಸೌಧದಲ್ಲಿ ಕೆಲಸ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.