ADVERTISEMENT

ವಹಿವಾಟು ವಿಸ್ತರಣೆಗೆವಿಚಾರ ವಿನಿಮಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:06 IST
Last Updated 11 ಆಗಸ್ಟ್ 2019, 20:06 IST

ಬೆಂಗಳೂರು‌: ‘ಪರಸ್ಪರ ವಿಚಾರ ವಿನಿಮಯ ಮತ್ತು ಸಹಕಾರ ಭಾವನೆ ತೋರಿದರೆ ಎಲ್ಲರ ವ್ಯವಹಾರಗಳೂ ವೃದ್ಧಿ
ಯಾಗುತ್ತವೆ’ ಎಂದು ಬಿಸಿನೆಸ್ ನೆಟ್‍ವರ್ಕ್ ಇಂಟರ್ ನ್ಯಾಷನಲ್‌ನ (ಬಿಎನ್‍ಐ) ಅಧ್ಯಕ್ಷ ಡಾ. ಐವಾನ್ ಮಿಸ್ನರ್ ಹೇಳಿದ್ದಾರೆ.

ವಾಣಿಜ್ಯೋದ್ಯಮಿಗಳ ಅತಿದೊಡ್ಡ ಸಂಸ್ಥೆಯಾಗಿರುವ ಬಿಎನ್‍ಐ ಬೆಂಗಳೂರು ಘಟಕದ ಸದಸ್ಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ಘಟಕದಲ್ಲಿ 2,300 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ದೇಶದಾದ್ಯಂತ ಇರುವ ಎಲ್ಲಾ ಸದಸ್ಯರನ್ನು ಒಂದೇ ಸೂರಿನಡಿ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸ
ಲಾಗಿತ್ತು.

ಬಿಎನ್‍ಐ ಸದಸ್ಯರು ಉದ್ದಿಮೆ ಅವಕಾಶಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಲಾಗಿತ್ತು. ದೇಶದಾದ್ಯಂತ ವ್ಯವಹಾರ ವಿಸ್ತರಣೆ ಮಾಡಲು ಬಯಸುವವರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.