ADVERTISEMENT

ಬೆಂಗಳೂರು ಜಲ ಮಂಡಳಿ: ನೀರಿನ ಅದಾಲತ್ ನಾಳೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 23:04 IST
Last Updated 25 ನವೆಂಬರ್ 2025, 23:04 IST
ಬೆಂಗಳೂರು ಜಲ ಮಂಡಳಿ
ಬೆಂಗಳೂರು ಜಲ ಮಂಡಳಿ   

ಬೆಂಗಳೂರು: ಬೆಂಗಳೂರು ಜಲ ಮಂಡಳಿಯು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ನ. 27ರಂದು ಬೆಳಿಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್‍ ಹಮ್ಮಿಕೊಂಡಿದೆ.

ಮಂಡಳಿ ಸೇವಾ ಠಾಣೆಗಳಾದ ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್ 1, 2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್. ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್.ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರದಲ್ಲಿ ಅದಾಲತ್ ನಡೆಯಲಿವೆ.

ಸಾರ್ವಜನಿಕರು ಮಂಡಳಿಯ ಸಹಾಯವಾಣಿ 1916ಕ್ಕೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ವಾಟ್ಸ್ಆ್ಯಪ್‌ ಸಂಖ್ಯೆ 8762228888ಕ್ಕೆ ಸಂದೇಶದ ಮೂಲಕ ದೂರು ಸಲ್ಲಿಸಬಹುದು ಎಂದು ಜಲ ಮಂಡಳಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.