ADVERTISEMENT

ಸ್ವ–ಉದ್ಯಮ: ಸಮಾಜ ಕಲ್ಯಾಣ ಇಲಾಖೆ ನೆರವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:32 IST
Last Updated 2 ಜನವರಿ 2021, 19:32 IST
ತಾಮರ ಫ್ಯಾಷನ್ ಮಳಿಗೆಯನ್ನು ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು. ಸಿ.ಮುನಿಕೃಷ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಪರಶುರಾಮ್ ಸಿನ್ನಾಳಕರ್, ಮುಖಂಡರಾದ ಪಿ.ಜೆ.ಅಂತೋಣಿಸ್ವಾಮಿ, ರವಿ, ಕೃಷ್ಣಪ್ಪ ಹಾಗೂ ಇತರರು ಇದ್ದರು.
ತಾಮರ ಫ್ಯಾಷನ್ ಮಳಿಗೆಯನ್ನು ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು. ಸಿ.ಮುನಿಕೃಷ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಪರಶುರಾಮ್ ಸಿನ್ನಾಳಕರ್, ಮುಖಂಡರಾದ ಪಿ.ಜೆ.ಅಂತೋಣಿಸ್ವಾಮಿ, ರವಿ, ಕೃಷ್ಣಪ್ಪ ಹಾಗೂ ಇತರರು ಇದ್ದರು.   

ಕೆ.ಆರ್.ಪುರ: ‘ಆರ್ಥಿಕವಾಗಿ ಹಿಂದುಳಿದ ಜನಾಂಗಗಳ ಯುವಕ– ಯುವತಿಯರು ಸ್ವಯಂ ಉದ್ಯಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ನೆರವಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಕೆ.ಆರ್.ಪುರ ಸಮೀಪದ ಆನಂದಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ನೆರವಿನಿಂದ ಆರಂಭಿಸಲಾದ ‘ತಾಮರ’ ನೂತನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ನಿಗಮವು ಉದ್ಯಮಶೀಲತೆ ಮತ್ತು ಕೌಶಲ ತರಬೇತಿ ನೀಡುತ್ತಾ ಬಂದಿದೆ. ಅರ್ಹ ಫಲಾನುಭವಿಗಳುಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ, ‘ಸಮಾಜ ಕಲ್ಯಾಣ ಇಲಾಖೆಯು ಸಮೃದ್ಧಿ ಯೋಜನೆಯಡಿ ₹220 ಕೋಟಿ ವೆಚ್ಚದಲ್ಲಿ 40ಕ್ಕೂ ಹೆಚ್ಚು ಫ್ರಾಂಚೈಸಿಗಳ ಸಹಯೋಗದಲ್ಲಿ ಮಳಿಗೆಗಳನ್ನು ಆರಂಭಿಸಲಾಗಿದೆ. 300ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ. 2021ರ ವೇಳೆಗೆ ಎರಡು ಸಾವಿರ ಮಳಿಗೆಗಳನ್ನು ತೆರೆಯುವ ಗುರಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.