ADVERTISEMENT

ಕೇಬಲ್‌ ಅಳವಡಿಕೆ ವಿಳಂಬ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:37 IST
Last Updated 6 ಅಕ್ಟೋಬರ್ 2021, 16:37 IST
ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇರಿಸಿದ ಕೇಬಲ್‌ಗಳು
ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇರಿಸಿದ ಕೇಬಲ್‌ಗಳು   

ಬೆಂಗಳೂರು: ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯ ಮುಖ್ಯ ರಸ್ತೆಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಕೇಬಲ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಕೇಬಲ್‌ಗಳನ್ನು ಮನಬಂದಂತೆ ಇರಿಸಲಾಗಿದೆ. ಕೆಲವರ ಮನೆಗಳ ಗೇಟ್‌ಗಳ ಮುಂದೆಯೂ ಹಾಕಲಾಗಿದೆ. ಇದರಿಂದ, ನಾಗರಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಎಂದು ದೂರಿದ್ದಾರೆ.

‘ಎಲ್‌ ಆ್ಯಂಡ್‌ ಟಿ ಕಂಪನಿ ಈ ಕಾಮಗಾರಿಯ ಗುತ್ತಿಗೆ ಪಡೆದಿದೆ. ಕಾಮಗಾರಿ ವಿಳಂಬವಾಗುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ. ಮನೆಗಳ ಮುಂದೆ ಕೇಬಲ್‌ ಇರಿಸಿ ನಿರ್ಬಂಧ ವಿಧಿಸುವ ಯತ್ನ ಮಾಡಲಾಗಿದೆ. ವಾಹನಗಳನ್ನು ಮನೆಯಿಂದ ಹೊರಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುತ್ತಿಲ್ಲ’ ಎಂದು ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಮುನಿರಾಜು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.