ADVERTISEMENT

ಮಹಿಳೆಯರಿಗೆ ಉಚಿತ ಕಂಪ್ಯೂಟರ್‌ ಕಲಿಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:18 IST
Last Updated 16 ಮೇ 2022, 16:18 IST

ಬೆಂಗಳೂರು: ಕೆನರಾ ಬ್ಯಾಂಕ್‌ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು ಮಹಿಳಾ ಉದ್ಯಮಿಗಳು ಹಾಗೂ ವಿದ್ಯಾವಂತ ಗೃಹಿಣಿಯರಿಗಾಗಿ 15 ದಿನಗಳ ಕಂಪ್ಯೂಟರ್‌ ಕಲಿಕಾ ತರಬೇತಿ ಶಿಬಿರ ಹಮ್ಮಿಕೊಂಡಿದೆ.

‘ತರಬೇತಿ ಅವಧಿಯಲ್ಲಿಬೇಸಿಕ್‌ ಕಂಪ್ಯೂಟರ್‌, ನುಡಿ, ಅಂತರ್ಜಾಲ ಹಾಗೂ ಇ–ಮೇಲ್‌ ಬಳಕೆ, ದೈನಂದಿನ ಬ್ಯಾಂಕಿಂಗ್‌ ವ್ಯವಹಾರ, ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ, ಸ್ಪೋಕನ್‌ ಇಂಗ್ಲಿಷ್‌, ಧ್ಯಾನ ಮತ್ತು ಯೋಗ ಕಲಿಸಲಾಗುತ್ತದೆ. ಈ ತಿಂಗಳ ಕೊನೆಯ ವಾರದಲ್ಲಿ ತರಬೇತಿ ಆರಂಭವಾಗಲಿದೆ’ ಎಂದು ಹೇಳಿದೆ.

ಹೆಚ್ಚಿನ ಮಾಹಿತಿಗೆ: ಕೆನರಾ ಬ್ಯಾಂಕ್‌ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, 3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು–55.

ADVERTISEMENT

ಸಂಪರ್ಕಕ್ಕೆ:9900158885 ಅಥವಾ 080-23463580.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.