
ಪೀಣ್ಯ ದಾಸರಹಳ್ಳಿ: ‘ದೇಶದಲ್ಲಿ ಪ್ರತಿ ವರ್ಷ 2.74 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಅದರಲ್ಲಿ 52 ಸಾವಿರ ಕ್ಯಾನ್ಸರ್ ರೋಗಿಗಳು ಮೃತಪಡುತ್ತಿದ್ದಾರೆ’ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ವಿಜಯಕುಮಾರ್ ಹೇಳಿದರು.
ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನಶೈಲಿಯನ್ನು ಉತ್ತಮ ರೀತಿಯಲ್ಲಿ ಬೆಳಸಿಕೊಂಡು ತಂಬಾಕು, ಮದ್ಯ, ಪ್ಲಾಸ್ಟಿಕ್ ಬಳಕೆ ಮುಂತಾದವುಗಳನ್ನು ತ್ಯಜಿಸಿ ಹಣ್ಣು, ತರಕಾರಿಗಳಂತಹ ಉತ್ತಮ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಷ್ಟ್ರಮಟ್ಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಡಾ.ನಾದಿಮುಲ್ ಹೂಡಾ ಅವರು ಜಾಗೃತಿ ಉಪನ್ಯಾಸ ನೀಡಿದರು. ಡಾ.ಸೋಮನಾಥ, ಕಾರ್ಯನಿರ್ವಾಹಣಾಧಿಕಾರಿ ಎಂ.ಕೀರ್ತನ್ ಕುಮಾರ್, ಟ್ರಸ್ಟಿ ಎಂ.ವರುಣ್ ಕುಮಾರ್, ಪ್ರಾಂಶುಪಾಲ ಮಹಾಬಲೇಶ್ವರ ತುಂಗಾ, ಉಪ ಪ್ರಾಂಶುಪಾಲೆ ಕೃಪಾ ಆರ್. ದೇವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.