ADVERTISEMENT

ವಿಶ್ವನಾಥ್‌ಗೆ ವ್ಯಂಗ್ಯಚಿತ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 16:31 IST
Last Updated 17 ಜುಲೈ 2024, 16:31 IST
ಎಚ್.ಎಸ್. ವಿಶ್ವನಾಥ್
ಎಚ್.ಎಸ್. ವಿಶ್ವನಾಥ್   

ಬೆಂಗಳೂರು: ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘವು ಜಿ. ಕೃಷ್ಣಕಾಂತ್ ನೆನಪಿನಲ್ಲಿ ನೀಡುವ 2024ರ ಸಾಲಿನ ವಾರ್ಷಿಕ ಪ್ರಶಸ್ತಿಗೆ ವ್ಯಂಗ್ಯ ಚಿತ್ರಕಾರ ಎಚ್.ಎಸ್. ವಿಶ್ವನಾಥ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹5000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ವಿಶ್ವನಾಥ್‌ ಅವರ ವ್ಯಂಗ್ಯಚಿತ್ರಗಳು 1973 ರಿಂದ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬ್ಯಾಂಕಿಗೆ ಸಂಬಂಧಪಟ್ಟ ಅನೇಕ ಕೃತಿಗಳು ಪ್ರಕಟಗೊಂಡಿವೆ. ಅನೇಕ ವ್ಯಂಗ್ಯ ಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾಂಕಿಗೆ ಸಂಬಂಧಪಟ್ಟ ಏಕವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನ ನೀಡಿದ್ದರು ಎಂದು ಸಂಘದ ಅಧ್ಯಕ್ಚ ವಿ.ಆರ್‌.ಸಿ. ಶೇಖರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT