ADVERTISEMENT

‘ಕ್ಯಾಶಿಫಿ’ ಆ್ಯಪ್ ಮಾಜಿ ಉದ್ಯೋಗಿ ಬಂಧನ

ಕಂಪನಿ ಉಪಾಧ್ಯಕ್ಷನ ಬ್ಯಾಂಕ್‌ ಖಾತೆಗೆ ಕನ್ನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
ಸೋನು ಶರ್ಮಾ ಹಾಗೂ ಸಮೀರ್ ಅಹಮ್ಮದ್
ಸೋನು ಶರ್ಮಾ ಹಾಗೂ ಸಮೀರ್ ಅಹಮ್ಮದ್   

ಬೆಂಗಳೂರು: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಸೇರಿ ವಿವಿಧ ಸೇವೆ ಒದಗಿಸುತ್ತಿರುವ ‘ಕ್ಯಾಶಿಫಿ’ ಆ್ಯಪ್ ಕಂಪನಿಯ ಉಪಾಧ್ಯಕ್ಷರ ಖಾತೆಯಿಂದ ಅಕ್ರಮವಾಗಿ ₹ 63,800 ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪದಡಿ, ಕಂಪನಿಯ ಮಾಜಿ ಉದ್ಯೋಗಿ ಸೇರಿ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಭರತ್‌ ನಗರದ ಸೋನು ಶರ್ಮಾ (21) ಹಾಗೂ ಥಣಿಸಂದ್ರದ ಸಮೀರ್ ಅಹಮ್ಮದ್ (20) ಬಂಧಿತರು. ಅವರಿಂದ ಎರಡು ಮೊಬೈಲ್‌ಗಳು ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಆರೋಪಿ ಸೋನು ಶರ್ಮಾ, ಕಂಪನಿಯ ಕಿಯೊಸ್ಕ್‌ ಕಾರ್ಯಾಚರಣೆ ವಿಭಾಗದಲ್ಲಿ ಕೆಲವು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ. ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದ. ಸ್ನೇಹಿತ ಸಮೀರ್‌ ಬಳಿ ಆತ ₹ 25 ಸಾವಿರ ಸಾಲ ಪಡೆದಿದ್ದ. ಅದನ್ನು ವಾಪಸು ಕೊಡುವಂತೆ ಸ್ನೇಹಿತ ಒತ್ತಾಯಿಸಲಾರಂಭಿಸಿದ್ದ. ಅವಾಗಲೇ ಆರೋಪಿ, ಸಂಚು ರೂಪಿಸಿ ಕೃತ್ಯ ಎಸಗಿದ್ದ’ ಎಂದು ಹೇಳಿದರು.

ADVERTISEMENT

‘ಮೊಬೈಲ್ ಮಾರಾಟ ಮಾಡುವವರು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಮೊಬೈಲ್ ಖರೀದಿಸುವ ಕಂಪನಿಯ ಸಿಬ್ಬಂದಿಯೇ ಹಣ ಪಾವತಿ ಮಾಡುತ್ತಾರೆ. ಹಣದ ವಹಿವಾಟಿಗಾಗಿ ಸಿಬ್ಬಂದಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದೆ’

‘ಸಹೋದ್ಯೋಗಿ ರಾಕೇಶ್ ಅವರ ಲಾಗಿನ್ ಐಡಿಯನ್ನು ಅಕ್ರಮವಾಗಿ ಬಳಸಿಕೊಂಡಿದ್ದ ಆರೋಪಿ, ಉಪಾಧ್ಯಕ್ಷರ ಖಾತೆಯಲ್ಲಿದ್ದ ಹಣವನ್ನು ಸ್ನೇಹಿತ ಸಮೀರ್ ಅಹ್ಮದ್‌ ಖಾತೆಗೆ ವರ್ಗಾಯಿಸಿದ್ದ. ಅದನ್ನು ಡ್ರಾ ಮಾಡಿಕೊಂಡಿದ್ದ ಸಮೀರ್, ತನಗೆ ಬರಬೇಕಿದ್ದ ₹ 25 ಸಾವಿರ ಇಟ್ಟುಕೊಂಡು ಉಳಿದ ಹಣವನ್ನು ಸೋನು ಶರ್ಮಾಗೆ ಕೊಟ್ಟಿದ್ದ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.