ADVERTISEMENT

ಬೆಂಗಳೂರು: ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 14:05 IST
Last Updated 18 ಫೆಬ್ರುವರಿ 2025, 14:05 IST
ಜಲಮಂಡಳಿ
ಜಲಮಂಡಳಿ   

ಬೆಂಗಳೂರು: ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ವ್ಯಾಪ್ತಿಯಲ್ಲಿ 800 ಮಿ.ಮೀ. ವ್ಯಾಸದ ಹೂಡಿ ಜಿಎಲ್‌ಆರ್‌ ಒಳಹರಿವು ಮಾರ್ಗ ಸ್ಥಗಿತಗೊಳಿಸುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ,‌ ಫೆಬ್ರುವರಿ 20ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾರತ್ತಹಳ್ಳಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಕಾವೇರಿ ನಾಲ್ಕನೇ ಹಂತ ಎರಡನೇ ಸ್ಟೇಜ್‌ನ ಪೂರ್ವ–1ರಲ್ಲಿ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ಜಲಮಂಡಳಿ ಈ ಕಾಮಗಾರಿಯನ್ನು ಕೈಗೊಳ್ಳುತ್ತಿದೆ.

ನೀರು ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು: 

ADVERTISEMENT

ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಾಲು, ಒ.ಎಂ.ಬಿ.ಆರ್. ಲೇಔಟ್, ಎಚ್.ಆರ್.ಬಿ.ಆರ್. ಲೇಔಟ್, ಸಿಗೇಹಳ್ಳಿ, ಭಟ್ಟರಹಳ್ಳಿ, ಮೇಡಹಳ್ಳಿ, ಟಿ.ಸಿ.ಪಾಳ್ಯ, ವಿಜಿನಾಪುರ, ಬೆಳ್ಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋನೇನ ಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಬಿಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.