
ಬೆಂಗಳೂರು: ನಗರದಲ್ಲಿ ಫೆಬ್ರುವರಿ 10ರಿಂದ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಾಗಿರುವ ಕಾವೇರಿ ನೀರನ್ನು ಪೂರೈಸಲು ಜಲಮಂಡಳಿ ಸಿದ್ಧವಿದೆ ಎಂದು ಜಲಮಂಡಳಿ ಅಧ್ಯಕ್ಷ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ವೈಮಾನಿಕ ಪ್ರದರ್ಶನಕ್ಕೆ ಪ್ರತಿನಿತ್ಯ 50 ಲಕ್ಷ ಲೀಟರ್‌ನಿಂದ 60 ಲಕ್ಷ ಲೀಟರ್ ನೀರು ಅಗತ್ಯವಿದೆ. ವಿಶೇಷ ಕೊಳವೆಮಾರ್ಗದ ಮೂಲಕ 2.5 ಕೋಟಿ ಲೀಟರ್ ನೀರು ಒದಗಿಸಲು ಜಲಮಂಡಳಿ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅಡಚಣೆಗಳು ಉಂಟಾದರೆ, ಜಲಮಂಡಳಿ ತನ್ನ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಸಹ ವ್ಯವಸ್ಥೆ ಮಾಡಲಿದೆ. ಈ ವರ್ಷ ಕಾವೇರಿ ನದಿ ಭಾಗದ ಜಲಾಶಯಗಳು ಭರ್ತಿಯಾಗಿವೆ. ಅಗತ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ’ ಎಂದಿದ್ದಾರೆ.
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರುವರಿಯಲ್ಲಿ ‘ಏರೊ ಇಂಡಿಯಾ–2025’ ನಡೆಯಲಿದ್ದು, ಪ್ರದರ್ಶನದ ವೇಳೆ ಯಾವುದೇ ಅನಾಹುತಗಳು ಸಂಭವಿಸಿದಂತೆ ನಗರ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಕೆಲವು ಚಟುವಟಿಕೆ ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಅವರ ಮನವಿ ಮೇರೆಗೆ ಡ್ರೋನ್, ಮೈಕ್ರೋಲೈಟ್ಸ್, ಬಲೂನ್, ಲಘು ವಿಮಾನ, ಪ್ಯಾರಾ ಗ್ಲೈಡರ್ಸ್ ಮತ್ತಿತರ ಸಾಧನಗಳ ಹಾರಾಟವನ್ನು ನಿಷೇಧಿಸಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ವೈಮಾನಿಕ ಪ್ರದರ್ಶನ ನಡೆಯಲಿದ್ದು, ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಬರಲಿದ್ದಾರೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.