ADVERTISEMENT

ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ: ಕೊಳವೆ ಮಾರ್ಗ ಕುಸಿತದಿಂದ ತೊಂದರೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 23:30 IST
Last Updated 19 ಸೆಪ್ಟೆಂಬರ್ 2025, 23:30 IST
ಜಲಮಂಡಳಿ
ಜಲಮಂಡಳಿ   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ(ಜಿಬಿಎ) ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್‌ ಬಳಿ ಕಾಮಗಾರಿ ಕೈಗೊಂಡಿದ್ದು, ಈ ಸಂದರ್ಭದಲ್ಲಿ 600 ಮಿ.ಮೀ. ವ್ಯಾಸದ ನೀರಿನ ಕೊಳವೆ ಕುಸಿದಿರುವ ಕಾರಣ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಸೆ.20ರಂದು (ಶನಿವಾರ) ಹಲವು ಭಾಗಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸರ್‌ಎಂವಿ ಲೇಔಟ್‌ ಭಾಗದ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ನಾಗರಬಾವಿ 1ನೇ ಹಂತದಿಂದ 14ನೇ ಹಂತ, ಜ್ಞಾನಭಾರತಿ ಬಡಾವಣೆ, ವಿಜಯನಗರ, ಬನವಾಸಿ ರಸ್ತೆ, ಕೋರಮಂಗಲ, ಗಾಂಧಿನಗರ ಸುತ್ತಮುತ್ತಲಿನ ಪ್ರದೇಶಗಳು, ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಭಾಗಗಳಲ್ಲಿ ನೀರಿನ ಸರಬರಾಜು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ವಿನಾಯಕ ಬಡಾವಣೆ, ಕೊಟ್ಟಿಗೆ ಪಾಳ್ಯ, ಸಜ್ಜೆಪಾಳ್ಯ, ಮಾಳಗಾರ, ಸುಮನಹಳ್ಳಿ, ನರಸಿಂಹಯ್ಯನಪಾಳ್ಯ,  ಎಂಪಿಎಂ ಬಡಾವಣೆ, ಐಟಿಐ ಬಡಾವಣೆ, ಮಲ್ಲತ್ತಹಳ್ಳಿ, ಗೌರಮ್ಮ ಬಡಾವಣೆ, ಈರನಪಾಳ್ಯ, ಪೂರ್ಣಚಂದ್ರ ಬಡಾವಣೆ, ಹೊನ್ನಪ್ಪ ಬಡಾವಣೆ, ಭೈರವೇಶ್ವರ ನಗರ, ಕಲ್ಯಾಣ ನಗರ, ಬಿಡಿಎ ಲೇಔಟ್‌, ಕೋಕೋನೆಟ್‌ ಗಾರ್ಡನ್‌,  ಗಾರ್ಡನ್‌ ವಿಲಾಸ್‌, ಸುಬ್ಬಣ್ಣ ಗಾರ್ಡನ್‌, ಅನ್ನಪೂರ್ಣೇಶ್ವರಿ ನಗರ, ಕೆನರಾ ಬ್ಯಾಂಕ್‌ ಕಾಲೊನಿ ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಆಗಲಿದೆ ಎಂದು ಹೇಳಿದ್ದಾರೆ.

ವಿದ್ಯುತ್ ವ್ಯತ್ಯಯ ಇಂದು

ಬೆಂಗಳೂರು: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಶನಿವಾರ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಶೋಭಾ ಸಿಟಿ ಚೊಕ್ಕನಹಳ್ಳಿ ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ ಎಕ್ಸ್ ಸರ್ವಿಸ್‌ಮೆನ್‌  ಲೇಔಟ್ ಪೊಲೀಸ್ ಕ್ವಾಟ್ರರ್ಸ್‌ ಆರ್.ಕೆ.ಹೆಗಡೆ ನಗರ ಶಬರಿ ನಗರ ಹೊಸ ಶಾಂತಿ ನಗರ ಕೆಂಪೇಗೌಡ ಲೇಯು ನಾಗೇನಹಳ್ಳಿ ಗ್ರಾಮ ರೀಜೆನ್ಸಿ ಪಾರ್ಕ್ ಎಸ್ತರ್ ಹಾರ್ಮೋನಿಕ್ ಲೇಔಟ್ ಬಾಲಾಜಿ ಲೇಔಟ್ ನಾಗೇನಹಳ್ಳಿ ಜಿಮ್ ಸ್ಲಂ ಬೋರ್ಡ್ ಮತ್ತು ಬೆಂಚ್ ರಾಯಲ್ ವುಡ್ ಅರ್ಕಾವತಿ ಲೇಔಟ್ ಥಣಿಸಂದ್ರ ಬೆಳ್ಳಹಳ್ಳಿ ಗ್ರಾಮ ತಿರುಮೇನಹಳ್ಳಿ ಗ್ರಾಮ ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ ಬೆಲಹಳ್ಳಿ ವಿಧಾನಸೌಧ ಲೇಔಟ್ ಕರ್ನಾಟಕ ಕಾಲೇಜು ಭಾರತೀಯ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.