ADVERTISEMENT

ಬಾರ್‌ ಮೇಲೆ ದಾಳಿ: 100 ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:54 IST
Last Updated 9 ಸೆಪ್ಟೆಂಬರ್ 2019, 19:54 IST

ಬೆಂಗಳೂರು: ನಗರದ ಮೂರು ಬಾರ್‌ಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿದ್ದ ಪೊಲೀಸರು, 100ಕ್ಕೂ ಹೆಚ್ಚು ಯುವತಿಯರನ್ನು ರಕ್ಷಿಸಿದ್ದಾರೆ.

‘ರೆಸಿಡೆನ್ಸಿ ರಸ್ತೆಯ ‘ಪೇಜ್–ತ್ರಿ’, ‘ಟೈಮ್ಸ್’ ಹಾಗೂ ಕಬ್ಬನ್ ಪಾರ್ಕ್ ಬಳಿಯ ‘ಡಯಟ್’ ಬಾರ್‌ಗಳು ಅಬಕಾರಿ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಮದ್ಯ ಹಾಗೂ ಆಹಾರ ಪೂರೈಕೆ ಮಾಡುತ್ತಿದ್ದವು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ನಡೆಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಮೂರು ಬಾರ್‌ಗಳ 36 ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಮಾಲೀಕರು ತಲೆಮರೆಸಿಕೊಂಡಿದ್ದಾರೆ. ಬಾರ್‌ನಲ್ಲಿದ್ದ 61 ಗ್ರಾಹಕರನ್ನು ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ’ ಎಂದರು.

ADVERTISEMENT

‘ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸುತ್ತಿದ್ದ ಮಾಲೀಕರು, ಅವರಿಂದಲೇ ಬಾರ್‌ನಲ್ಲಿ ಮದ್ಯ ಸರಬರಾಜು ಮಾಡಿಸುತ್ತಿದ್ದರು.

ಕೆಲ ಬಾರಿ ನೃತ್ಯವನ್ನೂ ಮಾಡಿಸುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.