ADVERTISEMENT

ಇ–ಸಿಗರೇಟ್ ಮಾರಾಟ: ವ್ಯವಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:11 IST
Last Updated 3 ಜೂನ್ 2024, 16:11 IST
ಇ–ಸಿಗರೇಟ್
ಇ–ಸಿಗರೇಟ್   

ಬೆಂಗಳೂರು: ಇ–ಸಿಗರೇಟ್ ಹಾಗೂ ವಿವಿಧ ದ್ರಾವಣಗಳನ್ನು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಎಂ.ಎಚ್. ಉಡುಗೊರೆ ಮಳಿಗೆಯ ವ್ಯವಸ್ಥಾಪಕ ಮೊಹಮ್ಮದ್ ಸಾದಿಕ್‌ (32) ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಎಚ್‌ಎಎಲ್‌ 3ನೇ ಹಂತದ 80 ಅಡಿ ರಸ್ತೆಯಲ್ಲಿರುವ ಎಂ.ಎಚ್. ಉಡುಗೊರೆ ಮಳಿಗೆ ಮೇಲೆ ಮೇ 31ರಂದು ದಾಳಿ ಮಾಡಲಾಗಿತ್ತು. ಇ–ಸಿಗರೇಟ್ ಹಾಗೂ ವಿವಿಧ ದ್ರಾವಣಗಳ ಅಕ್ರಮ ಮಾರಾಟ ಪತ್ತೆಯಾಯಿತು’ ಎಂದು ಪೊಲೀಸರು ಹೇಳಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಸಾದಿಕ್, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ. ಉಡುಗೊರೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ಬಂಧಿಸಲಾಗಿದೆ. ಮಳಿಗೆ ಮಾಲೀಕ ತಲೆಮರೆಸಿಕೊಂಡಿದ್ದಾನೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.