ಬೆಂಗಳೂರು: ಕ್ರೀಡಾ ಕೋಟಾದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಪಡೆಯುವವರು ದಾಖಲೆಗಳ ಭೌತಿಕ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಪ್ರತಿ ಕ್ರೀಡೆಗೆ ಕ್ರೀಡಾ ಇಲಾಖೆ ನಿಗದಿಪಡಿಸಿದ ಶೇಕಡವಾರು ಅಂಕಗಳ ಮಾನದಂಡದ ಆಧಾರದಲ್ಲೇ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲಾಗುತ್ತಿದೆ. ಸುಮಾರು 96 ವಿವಿಧ ಕ್ರೀಡೆಗಳಿಗೆ ಶೇ 5ರಿಂದ ಶೇ 100ರವರೆಗೆ ವಿಭಿನ್ನ ಅಂಕಗಳನ್ನು ನಿಗದಿ ಮಾಡಲಾಗಿದೆ. ಉದಾಹರಣೆಗೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಪ್ಯಾರಾ ಒಲಿಂಪಿಕ್ ಸಮಿತಿಯಿಂದ ಚಿನ್ನದ ಪದಕ ವಿಜೇತರು ಶೇ 100, ಬೆಳ್ಳಿಗೆ ಶೇ 99 ಹಾಗೂ ಕಂಚಿಗೆ ಶೇ 98 ನಿಗದಿ ಮಾಡಿಲಾಗಿದೆ ಎಂದು ಕೆಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.