ADVERTISEMENT

ಸಿಂಗಪುರದ ಕಂಪನಿಯಿಂದ ವಂಚನೆ: ವ್ಯಾಪಾರಿ ದೂರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:57 IST
Last Updated 13 ಜುಲೈ 2020, 20:57 IST

ಬೆಂಗಳೂರು: ಸಿಂಗಪುರ ಮೂಲದ ರಫ್ತು ಕಂಪನಿಯೊಂದು ತಮಗೆ ₹ 1.44 ಕೋಟಿ ವಂಚನೆ ಮಾಡಿರುವುದಾಗಿ ಬೆಂಗಳೂರಿನ ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ.

ವಿದೇಶದಿಂದ ಹೊಲಿಗೆ ಯಂತ್ರ ಹಾಗೂ ಪೂರಕ ಉಪಕರಣಗಳನ್ನು ತರಿಸಿಕೊಂಡು ರೆಸಿಡೆನ್ಸಿ ರಸ್ತೆಯಲ್ಲಿ ವ್ಯಾಪಾರ ಮಾಡುವ 66 ವರ್ಷದ ವ್ಯಾಪಾರಿ ಸಿಂಗಪುರ ಮೂಲದ ಕಂಪನಿಯಿಂದ ಯಂತ್ರ ಆಮದು ಮಾಡಿಕೊಳ್ಳುವ ಸಂಬಂಧ ಎರಡು ಇನ್‌ವಾಯ್ಸ್‌ಗಳನ್ನು ನೀಡಿದ್ದರು.

ಈ ವ್ಯಕ್ತಿಗೆ ಸೇರಿದ ಕಪೂರ್‌ ಕಂಪನಿಗೆ ಮೇ 29ರಂದು ಸಿಂಗಪುರದ ಕಂಪನಿಯಿಂದ ಮೇಲ್‌ ಬಂತು. ಈ ಮೇಲ್‌ನಲ್ಲಿ ಬ್ಯಾಂಕ್‌ ವಿವರ ಬದಲಿಸುವಂತೆ ಕೇಳಲಾಗಿತ್ತು. ಅದಕ್ಕೆ ಮೊದಲು ವ್ಯಾಪಾರಿ ಒಪ್ಪಿರಲಿಲ್ಲ. ಅನೇಕ ಮೇಲ್‌ ವಿನಿಮಯದ ಬಳಿಕ ಒಪ್ಪಿದರು.

ADVERTISEMENT

ಜೂನ್‌ 2ರಂದು ವಿದೇಶಿ ಕಂಪನಿ ಪುನಃ ಬ್ಯಾಂಕ್‌ ವಿವರ ಬದಲಿಸುವಂತೆ ಕೇಳಿ ಮೇಲ್‌ ಕಳುಹಿಸಿತ್ತು. ಮೇಲ್‌ ಲೆಟರ್‌ಹೆಡ್‌ನಲ್ಲಿ ಇತ್ತು. ಇದು ಕಂಪನಿ ಸಾಚಾ ಮೇಲ್‌ ಇರಬಹುದು ಎಂದು ಭಾವಿಸಿ ವ್ಯಾಪಾರಿ 1.90 ಲಕ್ಷ ಡಾಲರ್‌ ಹಣ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಮಾಹಿತಿ– ತಂತ್ರಜ್ಞಾನ ಕಾಯ್ದೆ, ವಂಚನೆ ಹಾಗೂ ಫೋರ್ಜರಿ ಅಡಿ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.