ಬೆಂಗಳೂರು: ಕಷ್ಟಗಳ ಪರಿಹಾರಕ್ಕಾಗಿ ಪೂಜೆ ಮಾಡುವುದಾಗಿ ಹೇಳಿದ್ದ ವ್ಯಕ್ತಿಯೊಬ್ಬ, ನಗರದ ನಿವಾಸಿ ತುಷಾರ್ ಎಂಬುವರಿಂದ ₹ 9.30 ಲಕ್ಷ ಪಡೆದು ವಂಚಿಸಿದ್ದಾನೆ. ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಷ್ಟಗಳ ಪರಿಹಾರಕ್ಕಾಗಿ ತುಷಾರ್, ಗೂಗಲ್ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದರು. ಅಘೋರಿ ಡಾಟ್ ಬಾಬಾ ಜಾಲತಾಣದಲ್ಲಿ ಸಂಪರ್ಕ ಸಂಖ್ಯೆ ಸಿಕ್ಕಿತ್ತು. ಅದಕ್ಕೆ ಕರೆ ಮಾಡಿದ್ದ ತುಷಾರ್, ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ದೀಪಕ್ ಬಾಬಾ ಎಂದು ಪರಿಚಯಿಸಿಕೊಂಡಿದ್ದ ವಂಚಕ, ‘ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಪೂಜೆ ಮಾಡಿಸಬೇಕು. ಅದಕ್ಕೆ ಹಣ ಖರ್ಚಾಗುತ್ತದೆ’ ಎಂದಿದ್ದ. ಅದನ್ನು ನಂಬಿದ್ದ ತುಷಾರ್, ಆರೋಪಿ ಸೂಚಿಸಿದ್ದ ಖಾತೆಗೆ ₹ 9.30 ಲಕ್ಷ ಹಣ ಹಾಕಿದ್ದರು. ಅದಾದ ನಂತರ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.