ಬೆಂಗಳೂರು: ನವಜಾತ ಹೆಣ್ಣು ಶಿಶುವನ್ನು ₹2.50 ಲಕ್ಷಕ್ಕೆ ಮಾರಾಟ ಮಾಡಿ, ಹಣ ಖರ್ಚಾದ ಬಳಿಕ ಮಗುವನ್ನು ವಾಪಸ್ ಕೊಡಿಸುವಂತೆ ಕೋರಿ ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
‘ವಿನೋಬಾ ನಗರದ ಎರಡನೇ ಹಂತದ ನಿವಾಸಿ ನಸೀಮಾ ಬಾನು ಅವರು ಆರೋಪಿಗಳಾದ ಅಮುದಾ, ರಮ್ಯಾ ಹಾಗೂ ಕಣ್ಣನ್ ಅವರ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ನಸೀಮಾ ಬಾನು ಅವರು 15 ವರ್ಷದ ಹಿಂದೆ ದಸ್ತಗೀರ್ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಿದ್ದವು. ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದರು. ಹಣದ ಆಸೆಗೆ ದಂಪತಿ ನವಜಾತ ಹೆಣ್ಣು ಶಿಶುವನ್ನು ಕೆಲವು ದಿನಗಳ ಹಿಂದೆ ₹2.50 ಲಕ್ಷಕ್ಕೆ ಮಾರಾಟ ಮಾಡಿದ್ದರು. ಈಗ ಮಗುವನ್ನು ವಾಪಸ್ ನೀಡುವಂತೆ ದೂರು ನೀಡಿದ್ದಾರೆ’ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.