ADVERTISEMENT

ಪಳನಿಯಪ್ಪನ್‌ಗೆ ಚಿತ್ರಕಲಾ ಪರಿಷತ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರಶಸ್ತಿಯನ್ನು ಚೆನ್ನೈನ ಕಲಾವಿದ ಆರ್.ಎಂ. ಪಳನಿಯಪ್ಪನ್ ಅವರಿಗೆ ನೀಡಿ ಗೌರವಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಬಲವೀರ ರೆಡ್ಡಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್, ಕಾರ್ಯದರ್ಶಿ ಶಶಿಧರ್ ಇದ್ದರು
ಚಿತ್ರಕಲಾ ಪರಿಷತ್ತಿನ ರಾಷ್ಟ್ರೀಯ ಪ್ರಶಸ್ತಿಯನ್ನು ಚೆನ್ನೈನ ಕಲಾವಿದ ಆರ್.ಎಂ. ಪಳನಿಯಪ್ಪನ್ ಅವರಿಗೆ ನೀಡಿ ಗೌರವಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಬಲವೀರ ರೆಡ್ಡಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್, ಕಾರ್ಯದರ್ಶಿ ಶಶಿಧರ್ ಇದ್ದರು   

ಬೆಂಗಳೂರು: ‘ದೂರದೃಷ್ಟಿ, ನಿರ್ದಿಷ್ಟ ಗುರಿ, ನಿಸ್ವಾರ್ಥವಾಗಿ ಕೈಗೊಳ್ಳುವ ಕೆಲಸದಿಂದ ಯಾವುದೇ ಒಂದು ಸಂಸ್ಥೆ ಯಶಸ್ವಿಯಾಗುತ್ತದೆ ಎಂಬುದಕ್ಕೆ ಚಿತ್ರಕಲಾ ಪರಿಷತ್ ಸಾಕ್ಷಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಭಿಪ್ರಾಯಪಟ್ಟರು.

ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಪ್ರೊ. ಎನ್.ಎಸ್ .ನಂಜುಂಡರಾವ್ ಅವರ 91ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಚೆನ್ನೈನ ಕಲಾವಿದ ಆರ್.ಎಂ. ಪಳನಿಯಪ್ಪನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯಮಟ್ಟದಲ್ಲಿ ಚಿತ್ರಕಲಾ ಪರಿಷತ್ ಉಜ್ವಲವಾಗಿ ಬೆಳೆಯಲು ನಂಜುಂಡರಾವ್ ಅವರ ಕನಸು, ಅವರು ಹಾಕಿದ ಭದ್ರ ಬುನಾದಿಯೇ ಕಾರಣ. ನಂಜುಂಡ ರಾವ್ ಅವರ ಪರಿಶ್ರಮದ ಫಲವೇ ಇಂದು ಚಿತ್ರಕಲಾ ಪರಿಷತ್ ಚಿತ್ರಕಲೆಗಳ ಮಹಾವಿದ್ಯಾಲಯವನ್ನು ಒಳಗೊಂಡು, ಪ್ರತಿವರ್ಷ ನೂರಾರು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ರಾಷ್ಟ್ರೀಯಮಟ್ಟದಲ್ಲಿ ಗಮನಸೆಳೆಯುವಂತಾಗಿದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ವಿಟಿಯು ಮಾಜಿ ಕುಲಪತಿ ಬಲವೀರ ರೆಡ್ಡಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್, ಕಾರ್ಯದರ್ಶಿ ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.