ADVERTISEMENT

ಒರಾಯನ್ ಮಾಲ್‌ನಲ್ಲಿ ಕ್ರಿಸ್‌ಮಸ್ ಅಲಂಕಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 19:45 IST
Last Updated 17 ಡಿಸೆಂಬರ್ 2018, 19:45 IST
ಒರಾಯನ್ ಮಾಲ್
ಒರಾಯನ್ ಮಾಲ್   

ಕ್ರಿಸ್‌ಮಸ್ ಆಚರಣೆಗೆ ವಿವಿಧ ಕಲಾಕೃತಿಗಳು ಹಾಗೂ ಬಣ್ಣ ಬಣ್ಣದ ದೀಪಾಲಂಕಾರಗಳೊಂದಿಗೆಯಶವಂತಪುರ ಬಳಿಯ ಒರಾಯನ್ ಮಾಲ್ ಹಾಗೂ ಬಾಣಸವಾಡಿ ಮುಖ್ಯರಸ್ತೆ ಬಳಿ ಇರುವ ಒರಾಯನ್ ಈಸ್ಟ್ ಮಾಲ್‌ ಸಜ್ಜಾಗಿದೆ.

ಮಾಲ್‌ನಲ್ಲಿ 40 ಅಡಿ ಎತ್ತರದ ಕೃತಕ ಕ್ರಿಸ್‌ಮಸ್ ಟ್ರಿ ಪ್ರತಿಷ್ಠಾಪಿಸಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಒರಾಯನ್ ಮಾಲ್‌ನ ಪ್ರವೇಶದ್ವಾರದ ಬಳಿ ಉಡುಗೊರೆ ಪೆಟ್ಟಿಗೆಗಳು, ಹಿಮಸಾರಂಗದ ಪ್ರತಿಕೃತಿ ಇಡಲಾಗಿದೆ. ಆಲಂಕಾರಿಕ ನಕ್ಷತ್ರಗಳು ಮಿಂಚುತ್ತಿದ್ದು, ಮಾಲ್‌ನ ಇಡೀ ವಾತಾವರಣ ಚಳಿಗಾಲದ ವಂಡರ್‌ಲ್ಯಾಂಡ್‌ನಂತೆ ಕಂಗೊಳಿಸುತ್ತಿದೆ. ಮಾಲ್‌ಗೆ ಭೇಟಿ ನೀಡಿದವರಿಗೆ ಪ್ರವಾಸಕ್ಕೆ ಹೋದಂತಹ ಅನುಭವ ನೀಡಲಿದೆ. ಮಕ್ಕಳಿಗಾಗಿಯೇ ಮ್ಯಾಜಿಕಲ್ ಪ್ರಪಂಚ ಸೃಷ್ಟಿಸಲಾಗಿದ್ದು, ಅವರಿಗೆ ಭರಪೂರ ಮನರಂಜನೆಯೂ ಸಿಗಲಿದೆ.

ಒರಾಯನ್ ಮಾಲ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಸುನಿಲ್ ಮುನ್ಶಿ, ‘ಒರಾಯನ್ ಮಾಲ್ ಹಾಗೂ ಒರಾಯನ್ ಈಸ್ಟ್ ಮಾಲ್‌ನಲ್ಲಿ ಕ್ರಿಸ್‌ಮಸ್ ಅಚರಣೆಗೆ ವಿಶೇಷ ಅಲಂಕಾರ ಮಾಡಿದ್ದೇವೆ. ಮೆರಿ ಮೇಕಿಂಗ್‌ನಿಂದ ಹಿಡಿದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಹಕರು ಮಾಲ್‌ಗಳಿಗೆ ಭೇಟಿ ನೀಡಿ ಸಂಭ್ರಮಿಸಬೇಕೆಂಬುದು ನಮ್ಮ ಬಯಕೆ’ ಎನ್ನುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.