ADVERTISEMENT

ಸೀಳು ತುಟಿ ಮಕ್ಕಳಿಗೆ ವಿಶೇಷ ಪೂರಕ ಆಹಾರ ಒದಗಿಸಲು ಅನುಮೋದನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 16:05 IST
Last Updated 13 ಜನವರಿ 2026, 16:05 IST
   

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಸೀಳು ತುಟಿ ಹೊಂದಿರುವ 12 ತಿಂಗಳೊಳಗಿನ ಮಕ್ಕಳಿಗೆ ವಿಶೇಷ ಪೂರಕ ಆಹಾರ ಒದಗಿಸಲು ಆರೋಗ್ಯ ಇಲಾಖೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. 

ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ಪ‍್ರಕಾರ, 2024–25ನೇ ಸಾಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 4.69 ಲಕ್ಷ ಮಕ್ಕಳು ಜನಿಸಿದ್ದಾರೆ. ಜಾಗತಿಕವಾಗಿ 700 ಜೀವಂತ ಜನನಗಳಲ್ಲಿ ಸರಾಸರಿ ಒಂದು ಮಗು ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಗೆ ಒಳಗಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ ವಾರ್ಷಿಕ ಸುಮಾರು 671 ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ ಎಂದು ಇಲಾಖೆ ತಿಳಿಸಿದೆ. 

2025–26ನೇ ಸಾಲಿಗೆ 12 ವರ್ಷದೊಳಗಿನ 671 ಮಕ್ಕಳಿಗೆ ಪೂರಕ ಆಹಾರ ಒದಗಿಸಲು ₹ 1.52 ಕೋಟಿ ಅನುದಾನಕ್ಕೆ ಅಂದಾಜಿಸಲಾಗಿತ್ತು. ಇಷ್ಟು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.