ADVERTISEMENT

ತೆಂಗಿನ ನಾರಿನಿಂದ ಪರಿಸರಸ್ನೇಹಿ ಉತ್ಪನ್ನ

ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದಿಂದ ಪ್ರದರ್ಶನ ಮತ್ತು ಮಾರಾಟ

ಮನೋಹರ್ ಎಂ.
Published 15 ಮೇ 2022, 20:09 IST
Last Updated 15 ಮೇ 2022, 20:09 IST
ತೆಂಗಿನ ನಾರಿನಿಂದ ತಯಾರಿಸಿರುವ ಉತ್ಪನ್ನಗಳು
ತೆಂಗಿನ ನಾರಿನಿಂದ ತಯಾರಿಸಿರುವ ಉತ್ಪನ್ನಗಳು   

ಬೆಂಗಳೂರು: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ತೆಂಗಿನ ನಾರಿನಿಂದಲೇಪರಿಸರ ಸ್ನೇಹಿ ತಟ್ಟೆ, ಗಿಡ ಬೆಳೆಸುವ ಪಾಟ್‌,ಮಂಚ, ಸ್ನಾನದ ವೇಳೆ ಉಪಯೋಗಿಸುವ ನಾರು ಸೇರಿದಂತೆ ತರಹೇವಾರಿ ಉತ್ಪನ್ನಗಳನ್ನು ಕರ್ನಾಟಕ ರಾಜ್ಯ ತೆಂಗಿನ ನಾರುಅಭಿವೃದ್ಧಿ ನಿಗಮ ಹೊರತಂದಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಚರ್ಮ ಕರಕುಶಲ ವಸ್ತು ಪ್ರದರ್ಶನ’ದಲ್ಲಿ ನಿಗಮದ ಮಳಿಗೆ ಜನರನ್ನು ಆಕರ್ಷಿಸುತ್ತಿದೆ.

ನಾರು ನಿಗಮವು ರಾಜ್ಯದ ಹಲವು ಕಡೆ ನಾರಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಹೊಂದಿದೆ. ಈ ಉತ್ಪನ್ನಗಳನ್ನು ತಯಾರಿಸಲು ರೈತರಿಂದಲೇ ತೆಂಗಿನ ಸಿಪ್ಪೆ ಖರೀದಿಸುತ್ತಿದೆ. ಇದರಿಂದ ರೈತರಿಗೆ ಆದಾಯದ ಮೂಲ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಲವರಿಗೆ ಉದ್ಯೋಗಾವಕಾಶಗಳೂ ಸಿಕ್ಕಿವೆ.

ADVERTISEMENT

ಶಾಲಾ ಮೇಜುಗಳು‌, ಮಂಚ,ಕಂಪ್ಯೂಟರ್‌ ಟೇಬಲ್‌ಗಳ ತಯಾರಿಕೆಯಲ್ಲೂ ತೆಂಗಿನ ನಾರು ಮಿಶ್ರಿತ ಬೋರ್ಡ್‌ಗಳನ್ನು ಬಳಸಲಾಗುತ್ತಿದೆ. ಪ್ರತಿ ಬೋರ್ಡ್‌ನಲ್ಲಿ ಶೇಕಡಾ 25ರಷ್ಟು ತೆಂಗಿನ ನಾರು ಬಳಸುತ್ತಿರುವುದರಿಂದ ಪೀಠೋಪಕರಣಗಳಿಗೆ ಮರಗಳ ಬಳಕೆ ಕಡಿಮೆ ಮಾಡುತ್ತದೆ. ‘ತೆಂಗಿನ ನಾರು ನಿಷ್ಪ್ರಯೋಜಕ ಎಂಬ
ಭಾವನೆಜನರಲ್ಲಿದೆ.ಆದರೆ, ನಿಗಮ ಸದ್ಯ 30ಕ್ಕೂ ಹೆಚ್ಚು ಉತ್ಪನ್ನಗಳನ್ನು ನಾರಿನಿಂದಲೇ ಹೊರತಂದಿದೆ. ಪರಿಸರಸ್ನೇಹಿ ಉತ್ಪನ್ನಗಳಾಗಿರುವುದರಿಂದ ಹೆಚ್ಚು ಬೇಡಿಕೆಯೂ ಇದೆ’ ಎನ್ನುತ್ತಾರೆರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ಪ್ರತಿನಿಧಿ ಗಿರೀಶ್‌.

‘ಮೇಜುಗಳನ್ನು ಹೆಚ್ಚಾಗಿ ಪ್ಲೈವುಡ್ ಬಳಸಿ ಸಿದ್ಧಪಡಿಸುತ್ತಾರೆ. ಅದಕ್ಕೆ ಪರ್ಯಾಯವಾಗಿ ತೆಂಗಿನ ನಾರಿನಿಂದ ತಯಾರಾದ ಹಲಗೆಗಳನ್ನೇ ಬಳಸಬಹುದಾಗಿದೆ. ಗೃಹೋಪಯೋಗಿ ವಸ್ತುಗಳಾದ ಹಾಸಿಗೆ, ಮಂಚ,ದಿಂಬು, ಹಗ್ಗ, ಪ್ರವೇಶ ದ್ವಾರಗಳಲ್ಲಿ ಹಾಕುವ ಮ್ಯಾಟ್‌ ಗಳೂ ನಾರಿನಿಂದ ತಯಾರಾಗುತ್ತಿವೆ’ ಎಂದರು.

‘ಕಾಫಿ, ಟೀ ಬಿಸಿ ತಾಗದಂತೆ ಲೋಟದ ಕೆಳಗೆ ಇಡುವ ಸಣ್ಣ ತಟ್ಟೆಗಳು, ಮನೆಯಲ್ಲಿ ನೇತು ಹಾಕಬಹುದಾದ ಪಾಟ್‌ಗಳು, ಅಲಂಕಾರಿಕ ಕೃತಕ ಗೂಡುಗಳಿಗೆ ಜನ ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.