ADVERTISEMENT

ಬರಗೂರು ವಿರುದ್ಧ ದೂರು ಸದುದ್ದೇಶದ ನಡವಳಿಕೆಯಲ್ಲ: ಎಲ್.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 22:57 IST
Last Updated 4 ಸೆಪ್ಟೆಂಬರ್ 2022, 22:57 IST
ಎಲ್‌.ಹನುಮಂತಯ್ಯ
ಎಲ್‌.ಹನುಮಂತಯ್ಯ   

ಬೆಂಗಳೂರು: ‘ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಬಯಸುತ್ತಿರುವುದು ಸದುದ್ದೇಶದ ನಡವಳಿಕೆಯಲ್ಲ’ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ
ಅಭಿಪ್ರಾಯಪಟ್ಟಿದ್ದಾರೆ.

ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿರುವ ಅವರು, ‘40 ವರ್ಷಗಳ ಹಿಂದೆ ಬರೆದಿದ್ದ ‘ಭರತನಗರಿ’ ಕಾದಂಬರಿಯಲ್ಲಿ ರಾಷ್ಟ್ರಗೀತೆಯ ವಿಡಂಬನೆ ಮಾಡಿದ್ದಾರೆ ಎಂಬ ದೂರಿನಲ್ಲಿ ರಾಷ್ಟ್ರದ್ರೋಹ ಹೇಗೆ ಆಗುತ್ತದೆ, ಸಮುದಾಯಗಳ ಭಾವನೆಯನ್ನು ಹೇಗೆ ಕೆಡಿಸುತ್ತದೆ ಎಂಬುದನ್ನು ವಿವರಿಸಿಲ್ಲ. ಆದ್ದರಿಂದ ದೇಶದ್ರೋಹದ ಪ್ರಶ್ನೆ ಉದ್ಬವಿಸುವುದಿಲ್ಲ’ ಎಂದಿದ್ದಾರೆ.

‘ಸಾಹಿತ್ಯದ ಒಡನಾಡಿಯಾಗಿ 48 ವರ್ಷಗಳಿಂದ ಬರಗೂರು ರಾಮಚಂದ್ರಪ್ಪ ಅವರನ್ನು ಕಂಡಿದ್ದೇನೆ. ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ ಬರಹವನ್ನು ಅವರು ಎಂದೂ ರಚಿಸಿಲ್ಲ’ಎಂದುತಿಳಿಸಿದ್ದಾರೆ.

ADVERTISEMENT

ಇಷ್ಟಾದರೂ ಬರಹ ಅಪಾರ್ಥ ಉಂಟು ಮಾಡಬಹುದೆಂದು ಊಹಿಸಿ ಮರು ಮುದ್ರಣದಲ್ಲಿ ಅನುಮಾನಕ್ಕೆ ಅವಕಾಶವಿಲ್ಲದಂತೆ ಪುನರ್ ರಚಿಸಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿ ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ. ಲೇಖಕನೊಬ್ಬ ಈ ರೀತಿ ವಿಷಾದ ವ್ಯಕ್ತಪಡಿಸಿದ ಬಳಿಕವೂ ಅವರ ಮೇಲೆ ದೂರು ದಾಖಲಿಸಿ ಕ್ರಮವಹಿಸಬೇಕೆಂದು ಬಯಸುವುದು ವಸ್ತುನಿಷ್ಠ ನಡೆಯಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.