ADVERTISEMENT

ಆಕ್ಷೇಪಾರ್ಹ ಬರಹ ಕಾಂಗ್ರೆಸ್ ದೂರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:16 IST
Last Updated 15 ನವೆಂಬರ್ 2018, 19:16 IST
   

ಬೆಂಗಳೂರು: ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಹಾಗೂ ಟಿಪ್ಪು ಸುಲ್ತಾನ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದಡಿ ಅರುಣ್‌ ಕುಮಾರ್ ಎಂಬುವರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ಕೊಟ್ಟಿದ್ದು, ‘ಅರುಣ್ ಕುಮಾರ್ ಎಂಬಾತ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಬಗ್ಗೆ ತುಂಬ ಕೆಟ್ಟದಾಗಿ ಬರೆದಿದ್ದಾನೆ. ಅಲ್ಲದೆ, ಟಿಪ್ಪು ವಿಚಾರವನ್ನೂ ತಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸಿದ್ದಾನೆ. ಪಕ್ಷ ಧರ್ಮ ವಿರೋಧಿ ಕೆಲಸ ಮಾಡುತ್ತಿದೆ ಎಂಬಂತೆ ಬಿಂಬಿಸಿದ್ದಾನೆ’ ಎಂದು ಆರೋಪಿಸಿದ್ದಾರೆ.

‘ಮೊನ್ನೆವರೆಗೂ ಕಾಂಗ್ರೆಸ್‌ಗೆ ಗಾಂಧಿ ತಂದೆಯಾಗಿದ್ದರು. ಇಂದು ಟಿಪ್ಪು ತಂದೆಯಾಗಿದ್ದಾರೆ. ನಾಳೆ ಕಸಬ್, ಅಫ್ಜಲ್, ಹಫೀಜ್ ತಂದೆಯಾದರೂ ಆಶ್ಚರ್ಯವಿಲ್ಲ’ ಎಂದು ಬರೆದುಕೊಂಡಿರುವ ಅರುಣ್, ‘ರಾಹುಲ್‌ ಗಾಂಧಿ ಗಾಂಜಾ ಸೇವಿಸುತ್ತಾರೆ’ ಎಂದೂ ಬರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.