ಬೆಂಗಳೂರು: ‘ಕಾರ್ಮಿಕ ವರ್ಗಕ್ಕೆ ಸೇರಿರುವ ನಾವುಗಳು ಅನ್ಯಾಯದ ಮೇಲೆ ನಿಂತಿರುವ ಈಗಿನ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಅವಶ್ಯಕತೆ ಇದೆ’ ಎಂದುಎಐಯುಟಿಯುಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ತಿಳಿಸಿದರು.
ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ಪೂರ್ವ ವಲಯದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ಎಲ್ಲ ಸದಸ್ಯರ ಮೇಲಿದೆ. ಅದನ್ನು ಕಾರ್ಯರೂಪಕ್ಕೆ ತರಲು ಕಾರ್ಮಿಕರಿಗೆ ಕ್ರಾಂತಿಕಾರಿ ಹಾಗೂ ಹೋರಾಟದ ವಿಚಾರಗಳ ಅವಶ್ಯಕತೆ ಇದೆ’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್.ಷಣ್ಮುಗಂ,‘ಕೋವಿಡ್‌ನಿಂದಾಗಿ ಲಕ್ಷಾಂತರ ದಿನಗೂಲಿ ನೌಕರರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಇತ್ತ ಕಾರ್ಮಿಕ ಕಾಯ್ದೆಗಳ ಮೂಲಕ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ನಿರಂತರ ಹೋರಾಟಗಳಿಂದ ಇದನ್ನು ತಡೆಯಬೇಕು’ ಎಂದು ಹೇಳಿದರು.
ಉಪಾಧ್ಯಕ್ಷ ಗೋವಿಂದರಾಜನ್, ‘ಕಾರ್ಮಿಕರ ಒಗ್ಗಟ್ಟು ಇಂದಿನ ಬಂಡವಾಳಶಾಹಿ ಪರಿಸ್ಥಿತಿಯಲ್ಲಿ ಅಗತ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.