ಬಿಬಿಎಂಪಿ
ಬೆಂಗಳೂರು: ಕೋರಮಂಗಲ ಕಣಿವೆ ವಿಭಾಗದ ಕಂಠೀರವ ಸ್ಟೇಡಿಯಂ ಬಳಿಯ ರಾಜಕಾಲುವೆಯ ವಾರ್ಷಿಕ ನಿರ್ವಹಣಾ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರಾದ ವಿ.ವಾಸು ಅವರಿಗೆ ₹50,000 ದಂಡ ವಿಧಿಸಲಾಗಿದೆ.
ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿರುವುದರಿಂದ ಗುತ್ತಿಗೆ ಕರಾರಿನಂತೆ ಪರಿಶೋಧ 41(1) ಮತ್ತು 41(2)ರನ್ವಯ ಬಿಬಿಎಂಪಿಯ ಬೃಹತ್ ನೀರುಗಾಲುವೆ-ಕೋರಮಂಗಲ ಕಣಿವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು ದಂಡ ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.