ADVERTISEMENT

ಹೆಬ್ಬಗೋಡಿ ಎಎಸ್ಐಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:02 IST
Last Updated 27 ಮೇ 2020, 19:02 IST
   

ಬೆಂಗಳೂರು: ಬುಧವಾರ ಒಂದೇ ದಿನ ಆರು ಮಂದಿಗೆ ಸೋಂಕು ತಗುಲಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 282ಕ್ಕೆ ತಲುಪಿದೆ.

ಹೊಸದಾಗಿ ವರದಿಯಾದ ಆರು ಪ್ರಕರಣಗಳಲ್ಲಿ 5 ಮಂದಿ ಅನ್ಯ ರಾಜ್ಯ ಹಾಗೂ ದೇಶದವರಾಗಿದ್ದಾರೆ. ಅವರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ಮಧ್ಯಪ್ರದೇಶದಿಂದ ಬಂದು ಕ್ವಾರಂಟೈನ್‌ಗೆಒಳಗಾಗಿದ್ದ 25 ವರ್ಷದ ಯುವತಿಗೆ ಸೋಂಕು ಖಚಿತವಾಗಿದೆ. ಹೆಬ್ಬಗೋಡಿ ಠಾಣೆಯ ಎಎಸ್‌ಐಗೆ ಸೋಂಕು ತಗುಲಿದೆ. ಅವರು ಬೇಗೂರು ನಿವಾಸಿಯಾಗಿದ್ದು, ರಜೆಯಲ್ಲಿದ್ದರು. ಕೆಲ ದಿನಗಳ ಹಿಂದಷ್ಟೇ ಹೆಬ್ಬಗೋಡಿ ಠಾಣೆಯಲ್ಲಿ ಇಬ್ಬರು ಬಂಧಿತರಿಗೆ ಸೋಂಕು ತಗುಲಿತ್ತು.

ADVERTISEMENT

ಯುಎಇಯಿಂದ ನಗರಕ್ಕೆ ಬಂದಿದ್ದ 28 ವರ್ಷದ ಮಹಿಳೆ ಹಾಗೂ ನೇಪಾಳದಿಂದ ವಾಪಸ್ ಆಗಿದ್ದ 22 ವರ್ಷದ ಯುವತಿಗೆ ಸೋಂಕು ತಗುಲಿದೆ. ಈ ಇಬ್ಬರೂ ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.