ADVERTISEMENT

ಬಂದ್‌, ಆನ್‌ಲೈನ್‌ ಶಿಕ್ಷಣಕ್ಕೆ ಖಾಸಗಿ ಸಂಸ್ಥೆಗಳ ಒಲವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:44 IST
Last Updated 14 ಮಾರ್ಚ್ 2020, 22:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ರಾಜ್ಯದಾದ್ಯಂತ ಶಾಲಾ, ಕಾಲೇಜುಗಳು ಬಂದ್‌ ಆಗಿರುವುರಿಂದ, ಹಲವು ಪರೀಕ್ಷೆಗಳ ತಯಾರಿಗಾಗಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ.

ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು, ನೇರ ತರಗತಿಗಳನ್ನು ವೀಕ್ಷಿಸಬಹುದಾದ ಉಚಿತ ಆನ್‌ಲೈನ್‌ ತರಗತಿಗಳನ್ನು ಆರಂಭಿಸುವುದಾಗಿ ಆಕಾಶ್‌ ಎಜುಕೇಷನಲ್‌ ಸರ್ವೀಸಸ್‌ ಲಿಮಿಟೆಡ್‌ನ (ಎಇಎಸ್‌ಎಲ್‌) ಅಂಗಸಂಸ್ಥೆ ‘ಮೆರಿಟ್ನೇಷನ್‌’ ತಿಳಿಸಿದೆ. 1ರಿಂದ 12ನೇ ತರಗತಿ ಹಾಗೂ ಜೆಇಇ/ ನೀಟ್‌ ಮೊದಲಾದ ವಿಶೇಷ ಪರೀಕ್ಷೆಗಳಿಗೆ ಈ ತರಗತಿ ನಡೆಯಲಿದೆ ಎಂದು ತಿಳಿಸಲಾಗಿದೆ. (ಮಾಹಿತಿಗೆwww.meritnation.com ಸಂಪರ್ಕಿಸಬಹುದು).

ಬೆಂಗಳೂರು ಮೂಲದ ಟ್ರಿಯೊ ವರ್ಲ್ಡ್‌ ಅಕಾಡೆಮಿ ಸ್ಕೂಲ್‌ ತನ್ನ್ ಶಾಲಾ ಆ್ಯಪ್‌ ‘ಇಆರ್‌ಪಿ‘ ಮೂಲಕ ತನ್ನ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡಲಿದೆ. ಶಿಕ್ಷಕರು ಈ ಆ್ಯಪ್‌ನಲ್ಲಿ ಧ್ವನಿ–ದೃಶ್ಯ ಲಿಂಕ್‌ಗಳನ್ನು ಅಪ್‌ಲೋಡ್‌ ಮಾಡಲಿದ್ದಾರೆ.

ADVERTISEMENT

ದೇಶದಾದ್ಯಂತ 800ರಷ್ಟು ಶಾಲೆಗಳನ್ನು ಹೊಂದಿರುವ ಲೀಡ್‌ ಸ್ಕೂಲ್‌ ಸಹ ‘ಲೀಡ್‌ ಸ್ಕೂಲ್‌ ಅಟ್‌ ಹೋಮ್‌’ ಕಾರ್ಯಕ್ರಮವನ್ನು ಇದೇ 16ರಿಂದ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.