ADVERTISEMENT

ಬೆಂಗಳೂರು | 23 ದಿನಗಳಲ್ಲಿ 34,645 ಮಂದಿಗೆ ಸೋಂಕು

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,200ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:47 IST
Last Updated 23 ಜುಲೈ 2020, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ 2,207 ಮಂದಿ ಕೊರೊನಾ ಸೋಂಕಿತರಾಗಿರುವುದು ಹಾಗೂ 48 ಮಂದಿ ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ.

ಕಳೆದ ಜೂನ್‌ 30ರ ವೇಳೆಗೆ 4,555 ಇದ್ದ ಪ್ರಕರಣಗಳ ಸಂಖ್ಯೆ ಈಗ 39,200ಕ್ಕೆ ತಲುಪಿದೆ. 23 ದಿನಗಳಲ್ಲಿ 34,645 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 688 ಮಂದಿ ಸಾವಿಗೀಡಾಗಿದ್ದಾರೆ. ನಗರದಲ್ಲಿ ಸೋಂಕಿತರಾಗಿ ಮೃತಪಟ್ಟವರ ಸಂಖ್ಯೆ 783ಕ್ಕೆ ತಲುಪಿದೆ. ಸದ್ಯ ಮರಣ ಪ್ರಮಾಣ ಶೇ 1.83ರಷ್ಟಿದೆ.

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಪೂರ್ವ ವಲಯದಲ್ಲಿಯೇ ಅಧಿಕ ಮಂದಿ (542) ಸೋಂಕಿತರಾಗಿದ್ದಾರೆ.ದಕ್ಷಿಣ ವಲಯದಲ್ಲಿ 528, ಬೊಮ್ಮನಹಳ್ಳಿಯಲ್ಲಿ 216, ದಾಸರಹಳ್ಳಿಯಲ್ಲಿ 31, ಮಹದೇವಪುರದಲ್ಲಿ 151, ಆರ್.ಆರ್.ನಗರದಲ್ಲಿ 133, ಪಶ್ಚಿಮ ವಲಯದಲ್ಲಿ 364 ಹಾಗೂ ಯಲಹಂಕದಲ್ಲಿ 88 ಮಂದಿ ಸೋಂಕಿತರಾಗಿದ್ದಾರೆ.

ADVERTISEMENT

ಅಧಿಕ ಮಂದಿ ಗುಣಮುಖ: ನಗರದಲ್ಲಿ ಚೇತರಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. 1,038 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 9,326ಕ್ಕೆ ಏರಿಕೆಯಾಗಿದೆ. 29,090 ಸೋಂಕಿತರು ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 361 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.