ADVERTISEMENT

ಜಿಲ್ಲಾ, ತಾಲ್ಲೂಕು ಕೋರ್ಟ್‌: ಕೆಲಸದ ಸಮಯ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 22:45 IST
Last Updated 30 ಡಿಸೆಂಬರ್ 2019, 22:45 IST
ಕೋರ್ಟ್‌ 
ಕೋರ್ಟ್‌    

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕುಗಳ ನ್ಯಾಯಾಲಯಗಳ ಕೆಲಸದ ಅವಧಿಯನ್ನು ಜನವರಿ 1ರಿಂದ ಪರಿಷ್ಕರಿಸಲಾಗಿದೆ.

ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೊದಲ ಅವಧಿ, 2ರಿಂದ 2.45ರವರೆಗೆ ಭೋಜನ ವಿರಾಮ, 2.45ರಿಂದ ಸಂಜೆ 5.45ರವರೆಗೆ 2ನೇ ಅವಧಿ ಇರುತ್ತದೆ.

ಇದಕ್ಕೆ ತಕ್ಕಂತೆ ನ್ಯಾಯಾಲಯ ಸಿಬ್ಬಂದಿಯ ಕೆಲಸದ ಅವಧಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಇರುತ್ತದೆ.

ADVERTISEMENT

ತಿಂಗಳ 4ನೇ ಶನಿವಾರ ಅರ್ಧ ದಿನ ಕೆಲಸವಾಗಿದ್ದು, ಕೋರ್ಟ್‌ ಕಲಾಪ ಇರುವುದಿಲ್ಲ. ನ್ಯಾಯಾಂಗ ಅಧಿಕಾರಿಗಳು ಈ ದಿನವನ್ನು ನ್ಯಾಯಾಲಯಗಳು ಮತ್ತು ಜೈಲುಗಳ ಭೇಟಿಗೆ ಬಳಸಿಕೊಳ್ಳಬೇಕು (ಇದುವರೆಗೆ ತಿಂಗಳ ಮೂರನೇ ಶನಿವಾರ ಇಂತಹ ಭೇಟಿ ನೀಡಬೇಕಿತ್ತು). ಸಿಬ್ಬಂದಿಯ ಸಾಂದರ್ಭಿಕ ರಜೆ 15 ಇರುತ್ತದೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.