ADVERTISEMENT

ಬೆಂಗಳೂರು | ಲಾಕ್‍ಡೌನ್‍ಗೆ ಎಫ್‍ಕೆಸಿಸಿಐ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 19:29 IST
Last Updated 12 ಜುಲೈ 2020, 19:29 IST

ಬೆಂಗಳೂರು: ಪುನಃ ಲಾಕ್‍ಡೌನ್ ಮಾಡುವ ಸರ್ಕಾರದ ನಿರ್ಧಾರದಿಂದ ಕೈಗಾರಿಕೆಗಳು ಮತ್ತೆ ಸಂಕಷ್ಟ ಎದುರಿಸಲಿವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಹೇಳಿದೆ.

ಸಂಘದ ಅಧ್ಯಕ್ಷ ಸಿ.ಆರ್.ಜನಾರ್ದನ್, ‘ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಲು ಕೈಗಾರಿಕೆಗಳು ಕಾರಣವಲ್ಲ. ಯಾವುದೋ ಒಂದೆರಡು ಕೈಗಾರಿಕೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಬಂದಿರಬಹುದು. ಶೇಕಡಾ 20ರಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಮತ್ತೊಮ್ಮೆ ಲಾಕ್‍ಡೌನ್‌ನಿಂದ ಇನ್ನಷ್ಟು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT