ADVERTISEMENT

ಕೋವಿಡ್–19 ‘ಪಾಸಿಟಿವ್’ ಭಯ; ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 21:25 IST
Last Updated 18 ಆಗಸ್ಟ್ 2020, 21:25 IST
   

ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ವ್ಯಾಸಂಗ ಮಾಡುತ್ತಿದ್ದ ಸಂದೀಪ್ ಕುಮಾರ್ (24) ಎಂಬುವರು ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಛತ್ತೀಸ್‌ಗಡದ ಸಂದೀಪ್‌ ಕುಮಾರ್, ಎಂ.ಟೆಕ್ ವಿದ್ಯಾರ್ಥಿಯಾಗಿ ದ್ದರು. ತಮ್ಮ ಹಾಸ್ಟೆಲ್‌ನ ಕೊಠಡಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೋಗಿ ಮೃತ ದೇಹವನ್ನು ಸ್ಥಳಾಂತರಿಸಲಾಗಿದೆ’ ಎಂದು ಸದಾಶಿವನಗರ ಪೊಲೀಸರು ಹೇಳಿದರು.

‘ಆತ್ಮಹತ್ಯೆಗೂ ಮುನ್ನ ಸಂದೀಪ್, ಸ್ನೇಹಿತರೊಬ್ಬರಿಗೆ ಇ–ಮೇಲ್‌ ಕಳುಹಿ ಸಿದ್ದರು. ‘ನನಗೆ ಕೊರೊನಾ ಪಾಸಿಟಿವ್ ಇರುವಂತೆ ಕಾಣುತ್ತಿದೆ. ಜೊತೆಗೆ ಭಯ ವಾಗುತ್ತಿದೆ’ ಎಂದು ಮೇಲ್‌ನಲ್ಲಿ ಬರೆದಿದ್ದರು. ಆ ಬಗ್ಗೆ ಸ್ನೇಹಿತನಿಂದ ಮಾಹಿತಿ ಪಡೆಯಲಾಗಿದೆ. ಭಯದಿಂದ ಮಾನಸಿಕ ಚಿಂತೆಗೆ ಈಡಾಗಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ’ ಎಂದೂ ತಿಳಿಸಿದರು.

ADVERTISEMENT

ಆತ್ಮಹತ್ಯೆ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಐಐಎಎಸ್ಸಿ ಆಡಳಿತ ಮಂಡಳಿ, ‘ಇದೊಂದು ದುಃಖದ ಸಂಗತಿ. ವಿದ್ಯಾರ್ಥಿಗಳು, ಸಿಬ್ಬಂದಿ ಮಾನಸಿಕವಾಗಿ ಸದೃಢವಾಗಿರಲು ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.