ADVERTISEMENT

ಮಲ್ಲೇಶ್ವರ, ಮತ್ತಿಕೆರೆಯಲ್ಲಿ ಔಷಧ ಸಿಂಪಡಣೆ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 16:06 IST
Last Updated 6 ಏಪ್ರಿಲ್ 2020, 16:06 IST
   

ಬೆಂಗಳೂರು: ಕೋವಿಡ್ -19 ಹಿನ್ನೆಲೆಯಲ್ಲಿ ಮಲ್ಲೇಶ್ವರ, ಅರಮನೆ ನಗರ, ಮತ್ತಿಕೆರೆ ವಾರ್ಡ್‌ಗಳಲ್ಲಿ ಪಾಲಿಕೆ ವತಿಯಿಂದ ನಡೆಯುತ್ತಿರುವ ಔಷಧ ಸಿಂಪಡಣೆ ಕಾರ್ಯವನ್ನು ಉಪಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅವರು ಸೋಮವಾರ ಪರಿಶೀಲಿಸಿದರು.

ಈ ಪ್ರದೇಶದಲ್ಲಿ ಪ್ರತಿ ದಿನ ಔಷಧಸಿಂಪಡಣೆ ಕಾರ್ಯ ನಡೆಯತ್ತಿದ್ದು, ಈ ಕುರಿತು ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರು ಮಾಹಿತಿ ಪಡೆದುಕೊಂಡರು.

ಅರಮನೆ ನಗರದ ಪಾಲಿಕೆ ಸದಸ್ಯೆ ಬಿ.ಸುಮಂಗಲ, ಮತ್ತಿಕೆರೆಯ ಪಾಲಿಕೆ ಸದಸ್ಯ ಎಂ.ಸಿ. ಜಯಪ್ರಕಾಶ್, ಮಲ್ಲೇಶ್ವರದ ಪಾಲಿಕೆ ಸದಸ್ಯ ಎನ್.ಜಯಪಾಲ ಉಪಸ್ಥಿತಿರಿದ್ದರು.

ADVERTISEMENT

ಪಡಿತರ ವಿತರಣೆ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಡಾ. ಅಶ್ವತ್ಥನಾರಾಯಣ ಅವರು ಕೂಲಿ ಕಾರ್ಮಿಕರು, ನಿರಾಶ್ರಿತರಿಗೆ ಪಡಿತರ ವಿತರಣೆ ಮಾಡಿ, ಕುಂದುಕೊರತೆ ಆಲಿಸಿದರು.

ಪಡಿತರ ಚೀಟಿ ಇಲ್ಲದವರಿಗೂ ಪಡಿತರ ವಿತರಣೆ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ಪಾಲನೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.