ADVERTISEMENT

ಕೋವಿಡ್‌: ಬೆಂಗಳೂರಿನಲ್ಲಿ 9 ಸಾವಿರ ದಾಟಿದ ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:08 IST
Last Updated 2 ಅಕ್ಟೋಬರ್ 2020, 20:08 IST
   

ಬೆಂಗಳೂರು: ರಾಜ್ಯದ ಕೋವಿಡ್ ಪೀಡಿತರಲ್ಲಿ ಮತ್ತೆ 125 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 9 ಸಾವಿರದ ಗಡಿ (9,119) ದಾಟಿದೆ.

ನಗರದಲ್ಲಿ ಸದ್ಯ ಮರಣ ಪ್ರಮಾಣ ದರ ಶೇ 1.25ರಷ್ಟಿದೆ. ನಗರದಲ್ಲಿ ಜುಲೈ ಅಂತ್ಯಕ್ಕೆ ಮೃತರ ಸಂಖ್ಯೆ 1 ಸಾವಿರದ ಗಡಿ ದಾಟಿತ್ತು. ಬಳಿಕ ಕೋವಿಡ್‌ ಸಾವಿನ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿತ್ತು. ಪರಿಣಾಮ ಮುಂದಿನ ಒಂದು ತಿಂಗಳಲ್ಲೇ ಮತ್ತೆ ಒಂದು ಸಾವಿರ ಮಂದಿ ಮೃತಪಟ್ಟಿದ್ದರು. ಮತ್ತೆ ಒಂದು ಸಾವಿರ ಮರಣ ಪ್ರಕರಣಗಳು 31 ದಿನಗಳಲ್ಲಿ ವರದಿಯಾಗಿವೆ. ಇದರಿಂದಾಗಿ ನಗರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಏಳು ತಿಂಗಳು ಕಳೆಯುವ ಮುನ್ನವೇ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 3 ಸಾವಿರಕ್ಕೆ ತಲುಪಿದೆ.

ನಗರದಲ್ಲಿ ಹೊಸದಾಗಿ 4,259 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2.41 ಲಕ್ಷ ದಾಟಿದೆ. ಈ ವಾರದ ಐದು ದಿನಗಳಲ್ಲಿ 20,933 ಮಂದಿ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿದೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 13.81ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಸೋಂಕಿತರಲ್ಲಿ ಮತ್ತೆ 2,298 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಗುಣಮುಖರ ಸಂಖ್ಯೆ 1.87 ಲಕ್ಷ ತಲುಪಿದೆ. 285 ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.