ADVERTISEMENT

'ಮನೆ ಮನೆಗೂ ಕೋವಿಡ್ ಗೈಡ್' ಕಿರುಹೊತ್ತಿಗೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:24 IST
Last Updated 1 ಆಗಸ್ಟ್ 2020, 20:24 IST
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕೊರೊನ ಸೋಂಕು ನಿಯಂತ್ರಣ ವ್ಯವಸ್ಥೆಯ ಮಾಹಿತಿ ನೀಡುವ ‘ಕೋವಿಡ್‌ ಗೈಡ್’ ಅನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌, ವಿಶೇಷ ಆಯುಕ್ತ (ಕಂದಾಯ) ಬಸವರಾಜು ಹಾಗೂ ಇತರ ಅಧಿಕಾರಿಗಳು ಇದ್ದಾರೆ.

ಬೆಂಗಳೂರು: ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕೋವಿಡ್ ವ್ಯವಸ್ಥೆ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಸಿದ್ಧಪಡಿಸಲಾಗಿರುವ 11 ಪುಟಗಳ ‘ಕೋವಿಡ್ ಗೈಡ್’ ಎಂಬ ಕಿರುಪುಸ್ತಕವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಬಿಡುಗಡೆ ಮಾಡಿದರು.

ಈ ಕಿರುಪುಸ್ತಕದಲ್ಲಿ ಎಲ್ಲ ಇಲಾಖೆಗಳ ಸಂಪರ್ಕ ಸಂಖ್ಯೆಗಳು, ಪಾಲಿಕೆ ಮಾಹಿತಿ ಹಾಗೂ ಮಲ್ಲೇಶ್ವರ, ಗಾಂಧೀನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಇರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮಾಹಿತಿ ಇದೆ. ಸೋಂಕು ಬಂದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತ ವಿವರಗಳೂ ಇವೆ.

‘ಈ ಕಿರುಪುಸ್ತಕವನ್ನು ಪಶ್ಚಿಮ ವಲಯದ ಆರೂ ವಿಧಾನಸಭೆ ಕ್ಷೇತ್ರಗಳ ಮನೆಮನೆಗೂ ಹಂಚಲಾಗುವುದು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ADVERTISEMENT

‘ಪಶ್ಚಿಮ ವಲಯದ ಸಹಾಯವಾಣಿಯನ್ನು (080-68248454) ದಿನದ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ. ಜನ ಇದರ ಸದುಪಯೋಗ ಪಡೆಯಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.