ಬೆಂಗಳೂರು: ಕೋವಿಡ್ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ತಯಾರಿಕೆ ತಂಡವನ್ನು ಪುನರ್ ರಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಬಿ.ಎಲ್. ಶಶಿಭೂಷಣ್ ಅಧ್ಯಕ್ಷತೆಯಲ್ಲಿ ರಚನೆಯಾದ ತಂಡವು 14 ಸದಸ್ಯರನ್ನು ಒಳಗೊಂಡಿದೆ. ಈ ತಂಡವು ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ತಜ್ಞರನ್ನು ಒಳಗೊಂಡಿದೆ.
ಈ ತಂಡವು ರಾಜ್ಯ ಮಟ್ಟದಲ್ಲಿ ಕೋವಿಡ್ ಮರಣಗಳಿಗೆ ಕಾರಣಗಳು, ರೋಗ ಲಕ್ಷಣಗಳು, ಸಹ ರೋಗಗಳು, ಲಸಿಕಾಕರಣ, ಆಸ್ಪತ್ರೆಗೆ ದಾಖಲಾದ ದಿನಗಳ ವಿಶ್ಲೇಷಣೆ, ದಾಖಲಾತಿ ಮತ್ತು ವರದಿಯಲ್ಲಿ ವಿಳಂಬ ಮುಂತಾದ ಅಂಶಗಳನ್ನು ಪರಿಶೀಲಿಸಿ, ವಿಶ್ಲೇಷಣೆ ನಡೆಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.