ADVERTISEMENT

ಅರ್ಚಕರ ಕುಟುಂಬದವರಿಗೆ ಲಸಿಕೆ ವಿತರಣೆ ಇಂದು

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 22:02 IST
Last Updated 10 ಜೂನ್ 2021, 22:02 IST
ತಾರಾ ಅನೂರಾಧಾ
ತಾರಾ ಅನೂರಾಧಾ   

ಬೆಂಗಳೂರು: ಮುಜರಾಯಿ ಹಾಗೂ ಖಾಸಗಿ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕರು, ಪರಿಚಾರಕರು, ಸೇವಾ ಸಿಬ್ಬಂದಿ, ಮಂಗಳವಾದ್ಯ ನುಡಿಸುವವರು ಮತ್ತು ಅವರ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರಿಗೆ ಶುಕ್ರವಾರ ಕೋವಿಡ್ ಲಸಿಕೆ ವಿತರಿಸಲಾಗುತ್ತದೆ.

ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಅವರು ರೂಪೇನ ಅಗ್ರಹಾರದಲ್ಲಿರುವ ಶ್ರೀಹರಿ ವೈಕುಂಠ ಕ್ಷೇತ್ರದಲ್ಲಿ ಉಚಿತವಾಗಿ ಲಸಿಕೆ ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ.

‘ಎಲ್ಲ ದೇವಾಲಯಗಳ ಅರ್ಚಕರು, ಪರಿಚಾರಕರು ಹಾಗೂ ಸೇವಾ ಸಿಬ್ಬಂದಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಲಸಿಕೆ ಕೇಂದ್ರಕ್ಕೆ ಬರುವಾಗ ಕಡ್ಡಾಯವಾಗಿ ಆಧಾರ್ ಅಥವಾ ಛಾಯಾಚಿತ್ರ ಇರುವ ಗುರುತಿನ ಚೀಟಿ ತರಬೇಕು’ ಎಂದು ತಾರಾ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಸಂಪರ್ಕಕ್ಕೆ ಮೊ.: 9480620338 ಅಥವಾ 8217737471

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.