ADVERTISEMENT

ಕಸ್ಟಮ್ ಅಧಿಕಾರಿ ಬ್ಯಾಗ್‌ನಲ್ಲಿ ₹74.81 ಲಕ್ಷ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 17:28 IST
Last Updated 19 ಜನವರಿ 2021, 17:28 IST
ಅಧಿಕಾರಿಯ ಬ್ಯಾಗ್‌ನಲ್ಲಿ ಪತ್ತೆಯಾದ ಹಣ
ಅಧಿಕಾರಿಯ ಬ್ಯಾಗ್‌ನಲ್ಲಿ ಪತ್ತೆಯಾದ ಹಣ   

ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹74.81 ಲಕ್ಷ ಹಣ ಸಾಗಿಸುತ್ತಿದ್ದಕಸ್ಟಮ್‌ ಅಧಿಕಾರಿಯೊಬ್ಬರುತಪಾಸಣೆ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಅಧಿಕಾರಿಗಳಿಗೆ ಮಂಗಳವಾರ ಸಿಕ್ಕಿಬಿದ್ದಿದ್ದಾರೆ.

ಚೆನ್ನೈನ ಮೊಹಮ್ಮದ್‌ ಇರ್ಫಾನ್‌ ಅಹ್ಮದ್‌ ಸಿಕ್ಕಿಬಿದ್ದಿರುವ ಕಸ್ಟಮ್‌ ಅಧಿಕಾರಿ.

ಕಸ್ಟಮ್‌ ಸೂಪರಿಡೆಂಟ್‌ ಆಗಿರುವ ಅಹ್ಮದ್‌, ತನ್ನ ಪತ್ನಿಯೊಂದಿಗೆ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿಲಖನೌಗೆ ಪ್ರಯಾಣಿಸುತ್ತಿದ್ದರು. ತಪಾಸಣೆ ವೇಣೆ ಅಹ್ಮದ್‌ ಅವರ ಬ್ಯಾಗ್‌ನಲ್ಲಿ ಭಾರಿ ಹಣ ಪತ್ತೆಯಾಗಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಸಿಐಎಸ್‌ಎಫ್ ಅಧಿಕಾರಿಗಳು ಕಸ್ಟಮ್ ಅಧಿಕಾರಿಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ನಮ್ಮ ಮುಂದೆಯೂ ಹಾಜರು ಪಡಿಸಿಲ್ಲ. ಆದರೆ, ಅವರನ್ನು ಹಣದ ಸಮೇತ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಗೆ ಹಸ್ತಾಂತರಿಸಿರಬಹುದು. ಹಣದ ಮೂಲದ ಬಗ್ಗೆ ಇ.ಡಿ ಅಧಿಕಾರಿಗಳೇ ವಿಚಾರಣೆ ನಡೆಸಬಹುದು’ ಎಂದು ಈಶಾನ್ಯ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯಾವುದೇ ಪ್ರಯಾಣಿಕರು ಅನುಮತಿಯಲ್ಲದೆ ವಿಮಾನದಲ್ಲಿ ಭಾರಿ ಪ್ರಮಾಣದ ಹಣ ಸಾಗಿಸುವಂತಿಲ್ಲ. ಆದರೆ, ಅಹ್ಮದ್ ₹2 ಸಾವಿರ ಹಾಗೂ ₹500 ಮುಖಬೆಲೆಯ ಹಣದ ಕಂತೆಗಳನ್ನು ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.