ಬೆಂಗಳೂರು: ಬಾಲಿವುಡ್ ನಟನ ಸಂಬಂಧಿಯೊಬ್ಬರ ಮನೆಯಲ್ಲಿದ್ದ ₹1.31 ಕೋಟಿ ಬೆಲೆಬಾಳುವ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಹಣ ಕಳವಾಗಿದ್ದು, ಈ ಸಂಬಂಧ ಹಲಸೂರು ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಗರದ ಅಬ್ಬಾಸ್ ಅಲಿ ರಸ್ತೆಯ ಎಂಬೆಸಿ ಕ್ರೌನ್ ಅಪಾರ್ಟ್‍ಮೆಂಟ್ ಸಮುಚ್ಚಯದಲ್ಲಿ ವಾಸವಿರುವ ಖುರ್ಷೀದ್ ಇರಾನಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆ ಕೆಲಸ ಮಾಡುವ ಮೇರಿ ಎಂಬುವರ ವಿರುದ್ಧಖುರ್ಷೀದ್ ದೂರು ನೀಡಿದ್ದಾರೆ.
'ಖುರ್ಷೀದ್ ತನ್ನ ಕುಟುಂಬದೊಂದಿಗೆ ಎರಡು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಮನೆಯಲ್ಲಿದ್ದ 100 ಗ್ರಾಂ ತೂಕದ ಒಂಬತ್ತು ಚಿನ್ನದ ಬಿಸ್ಕೆಟ್‍ಗಳು, ₹84 ಲಕ್ಷ ನಗದು ಹಾಗೂ ₹11 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಆರೋಪಿ ಎಗರಿಸಿದ್ದಾಳೆ. ನ.29ರಂದು ಲಾಕರ್ ತೆರೆದು ನೋಡಿದಾಗ ಕಳ್ಳತನದ ವಿಚಾರ ತಿಳಿದಿದೆ. ವಿಚಾರಣೆ ಮುಂದುವರಿದಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.