ಬೆಂಗಳೂರು: ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಿದ್ದರಾಜು (26) ಎಂಬುವರ ಕೊಲೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಲಕ್ಷ್ಮಣ ಅಲಿಯಾಸ್ ಲಚ್ಚು (34), ಕೆಂಪೇಗೌಡನಗರದ ಚೇತನ್ (35) ಹಾಗೂ ಕೆ.ಆರ್. ರಸ್ತೆಯ ನಿವಾಸಿ ಪ್ರತಾಪ್ (31) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.
‘ಸಿದ್ದರಾಜು ಅವರು ಹೂವು ಮಾರುವ ಲತಾ (28) ಎಂಬುವರನ್ನು 2013ರಲ್ಲಿ ಮದುವೆಯಾಗಿದ್ದರು. ಗಂಡ
ನನ್ನು ಬಿಟ್ಟು ತವರುಮನೆಗೆ ಹೋಗಿದ್ದ ಲತಾ, ಹೂವಿನ ವ್ಯಾಪಾರಿ ಲಕ್ಷ್ಮಣನನ್ನು ಎರಡನೇ ಮದುವೆಯಾಗಿದ್ದರು. ಕೋಪ
ಗೊಂಡಿದ್ದ ಸಿದ್ದರಾಜು, ತವರುಮನೆಗೆ ಹೋಗಿ ಗಲಾಟೆ ಮಾಡಿದ್ದರು. ಲತಾ ಹಾಗೂ ಅವರ ತಾಯಿ ಮೇಲೆ ಹಲ್ಲೆ ಮಾಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಲಕ್ಷ್ಮಣ ತನ್ನ ಸಹಚರರ ಜೊತೆ ಸೇರಿ ಸಿದ್ದರಾಜು ಕೊಲೆಗೆ ಸಂಚು ರೂಪಿಸಿದ್ದ.’
‘ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ಧರಾಜು ಶುಕ್ರವಾರ (ಆ.7) ಸಂಜೆ ಸ್ನೇಹಿತರ ಜೊತೆ ಬಾರ್‌ಗೆ ಹೋಗಿದ್ದರು. ಮದ್ಯ ಕುಡಿದ ಬಳಿಕ ಬಾರ್‌ನಿಂದ ಹೊರಬಂದು ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ವೇಳೆ ಲಕ್ಷ್ಮಣ ಹಾಗೂ ಸಹಚರರು ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದರು’ ಎಂದೂ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.