ADVERTISEMENT

ದರೋಡೆಗೆ ಸಂಚು: ಐದು ಮಂದಿ ಬಂಧನ

ಅಧಿಕಾರಿಗಳಿಂದ ಮಾರಕಾಸ್ತ್ರಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 0:21 IST
Last Updated 3 ಜೂನ್ 2021, 0:21 IST
ಬಂಧಿತರು ಹಾಗೂ ವಶಪಡಿಸಿಕೊಂಡಿರುವ ಮಾರಕಾಸ್ತ್ರಗಳು
ಬಂಧಿತರು ಹಾಗೂ ವಶಪಡಿಸಿಕೊಂಡಿರುವ ಮಾರಕಾಸ್ತ್ರಗಳು   

ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ, ದರೋಡೆಗೆ ಸಂಚು ರೂಪಿಸಿದ್ದ ಆರೋಪದಡಿ ಕುಖ್ಯಾತ ರೌಡಿಗಳ ಸಹಚರರಾದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಸ್ಲೀಂ ಪಾಷಾ (38), ಶೇಖ್ ತನ್ವರ್‌ (21), ಮಹಮದ್ ಸುಲ್ತಾನ್ (23), ಸೈಯದ್‌ ಫೈರೋಜ್‌ (32) ಹಾಗೂ ಇಮ್ರಾನ್ ಪಾಷಾ (34) ಬಂಧಿತರು.

‘ಇವರು ವಿವೇಕನಗರ ಠಾಣಾ ವ್ಯಾಪ್ತಿಯ ಇನ್ಫೆಂಟ್ ಜೀಸಸ್ ಚರ್ಚ್‌ ಸಮೀಪದ ದಾರಿಯಲ್ಲಿ ಒಂಟಿಯಾಗಿ ಬರುವವರ ಮೇಲೆ ಹಲ್ಲೆ ನಡೆಸಿ, ನಗದು–ಚಿನ್ನಾಭರಣ ದೋಚಲು ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದರು. ಈ ವೇಳೆ ಬಂಧಿಸಲಾಯಿತು‘ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ತಸ್ಲೀಂ ಪಾಷಾ ಹಾಗೂಸೈಯದ್‌ ಫೈರೋಜ್‌ ಅಶೋಕನಗರ ಠಾಣೆಯ ರೌಡಿಶೀಟರ್‌ಗಳಾಗಿದ್ದು, ತಸ್ಲೀಂ ವಿರುದ್ಧ ಕೊಲೆ ಸೇರಿದಂತೆ 15 ಪ್ರಕರಣಗಳು ದಾಖಲಾಗಿವೆ. ಮಹಮದ್ ಸುಲ್ತಾನ್ ಕಬ್ಬನ್‌ಪಾರ್ಕ್‌ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೂ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳಿವೆ. ಬಂಧಿತರೆಲ್ಲರೂ ಎಸ್‌.ಆರ್.ನಗರ, ಬಿಟಿಎಂ ಬಡಾವಣೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಕುಖ್ಯಾತ ರೌಡಿ ಶಹನವಾಜ್ ಹಾಗೂ ಅಶೋಕನಗರದ ರೌಡಿ ಹೈದರ್‌ನ ಸಹಚರರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.