ADVERTISEMENT

ಲೈಂಗಿಕ ಕಿರುಕುಳ ಎಸಗಿ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:13 IST
Last Updated 1 ಮೇ 2020, 22:13 IST

ಬೆಂಗಳೂರು: ಯುವತಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಎಸಗಿ, ಅದನ್ನು ಪ್ರಶ್ನಿಸಿದ ಯುವತಿ ಪೋಷಕರಿಗೂಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಆರ್‌. ಅಖಿಲ್ (25) ಎಂಬಾತನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಮಿಮ್ಮಿಂಗ್ ಪೂಲ್ ಎಕ್ಸ್‌ಟೆನ್ಶನ್ ನಿವಾಸಿ ಅಖಿಲ್, ಯುವತಿಯ ಮನೆ ಸಮೀಪದಲ್ಲೇ ವಾಸವಿದ್ದಾನೆ. ಕೈ ಸನ್ನೆಗಳ ಮೂಲಕ ಹಲವು ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ. ಈ ಸಂಬಂಧ ಯುವತಿ ಹಾಗೂ ಪೋಷಕರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಲೈಂಗಿಕ ಕಿರುಕುಳವನ್ನು ಪ್ರಶ್ನಿಸಿದ್ದ ಯುವತಿ ಪೋಷಕರು, ಅಖಿಲ್‌ಗೆ ಬುದ್ದಿವಾದ ಹೇಳಿದ್ದರು. ಆತನ ಸಂಬಂಧಿಕರಿಗೂ ಮಾಹಿತಿ ನೀಡಿದ್ದರು. ಅಷ್ಟಾದರೂ ಆರೋಪಿ, ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಪೋಷಕರಿಗೂ ಜೀವ ಬೆದರಿಕೆ
ಯೊಡ್ಡಿದ್ದ’ ಎಂದೂ ತಿಳಿಸಿದರು.

ADVERTISEMENT

‘ಆರೋಪಿ ಅಖಿಲ್‌ಗೆ ನೋಟಿಸ್ ನೀಡಲಾಗಿದೆ. ಆತ ತಲೆಮರೆ ಸಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.