ಬೆಂಗಳೂರು: ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ ಮುಖಂಡರ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಯುವರಾಜ್ (ಸ್ವಾಮಿ) ಬಳಸುತ್ತಿದ್ದ ಎರಡು ಐಷಾರಾಮಿ ಕಾರುಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಯುವರಾಜ್ ಬಳಸುತ್ತಿದ್ದ ಬೆಂಜ್ ಕಾರು ಹಾಗೂ ರೇಂಜ್ ರೋವರ್ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿ, ಸಿಸಿಬಿ ಕಚೇರಿ ಬಳಿ ನಿಲ್ಲಿಸಲಾಗಿದೆ. ಇದರಲ್ಲಿ ಒಂದು ಕಾರು ರಾಜಕಾರಣಿಯೊಬ್ಬರಿಂದ ಪಡೆದಿರುವುದು ಎಂದು ಮೂಲಗಳು ತಿಳಿಸಿವೆ.
ಹಿರಿಯ ರಾಜಕಾರಣಿಗಳು ತನ್ನ ಆಪ್ತರೆಂದು ಹೇಳಿಕೊಂಡಿದ್ದ ಯುವರಾಜ್, ದೊಡ್ಡ ಹುದ್ದೆಗಳನ್ನು ಕೊಡಿಸವುದಾಗಿ ಹಲವರಿಂದ ಹಣ ಪಡೆದು, ವಂಚಿಸಿರುವ ಆರೋಪದಡಿ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.