ADVERTISEMENT

ಮಾರ್ಕ್ ಕಬ್ಬನ್ ಪ್ರತಿಮೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 21:44 IST
Last Updated 28 ಜೂನ್ 2020, 21:44 IST
ಪ್ರತಿಮೆಯನ್ನು ಕಬ್ಬನ್ ಉದ್ಯಾನದ ಬ್ಯಾಂಡ್‍ಸ್ಟ್ಯಾಂಡ್ ಬಳಿಗೆ ಸ್ಥಳಾಂತರಿಸಲಾಯಿತು.
ಪ್ರತಿಮೆಯನ್ನು ಕಬ್ಬನ್ ಉದ್ಯಾನದ ಬ್ಯಾಂಡ್‍ಸ್ಟ್ಯಾಂಡ್ ಬಳಿಗೆ ಸ್ಥಳಾಂತರಿಸಲಾಯಿತು.   

ಬೆಂಗಳೂರು: ಹೈಕೋರ್ಟ್ ಆವರಣದಲ್ಲಿದ್ದ ಸರ್.ಮಾರ್ಕ್ ಕಬ್ಬನ್ ಪ್ರತಿಮೆಯನ್ನು ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್ ಬಳಿಗೆ ಭಾನುವಾರ ಸ್ಥಳಾಂತರಿಸಲಾಯಿತು.

'ಪ್ರತಿಮೆಯು ಕೋರ್ಟ್ ಆವರಣದಲ್ಲಿದ್ದ ಕಾರಣ ಪ್ರತಿವರ್ಷ ಆಗಸ್ಟ್ 23ರಂದು ಆಚರಿಸುವ ಕಬ್ಬನ್ ಜನ್ಮದಿನಾಚರಣೆ ವೇಳೆ ಕಲಾಪಗಳಿಗೆ ಅಡಚಣೆಯಾಗುತ್ತಿತ್ತು. ಪ್ರವಾಸಿಗರಿಗೂ ಕೋರ್ಟ್ ಆವರಣ ಪ್ರವೇಶಿಸಿ, ಪ್ರತಿಮೆ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ನ್ಯಾಯಾಲಯ ಹಾಗೂ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿಮೆ ಸ್ಥಳಾಂತರಿಸಿ, ಮರುಪ್ರತಿಷ್ಠಾಪನೆ ಮಾಡಲಾಗಿದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT