ಪ್ರಾತಿನಿಧಿಕ ಚಿತ್ರ
ಸಂಗೀತ– ಸಂವಾದ
ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಸಂಸ್ಥೆಯ ವತಿಯಿಂದ ಇದೇ 11 ಮತ್ತು 12ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ‘ಸಂಗೀತ, ಮನಸ್ಸು ಮತ್ತು ಸಮಾಜ ನಿರ್ಮಾಣ’ ಸಂಗೀತ ಉತ್ಸವವನ್ನು ಆಯೋಜಿಸಲಾಗಿದೆ.
ಸಂವಾದ ಸಹ ಇರಲಿದೆ. ಅತಿಥಿಗಳು: ಸುಶೀಲಾ ಮೆಹ್ತಾ, ಅ.ನ. ಯಲ್ಲಪ್ಪ ರೆಡ್ಡಿ. ಸಂಗೀತ ಮೂಲಾಧಾರ: ಸುಪ್ರೀತಾ ಪ್ರದೀಪ್, ನಮ್ರತಾ ಪ್ರದೀಪ್, ಚಂದನಾ ಮುರಳೀಧರ, ವಿದುಲಾ ವೇಣುಗೋಪಾಲ್, ಷಡಜ್ ಗೋಡ್ಖಿಂಡಿ, ಮೌನಾ ರಾಮಚಂದ್ರ. ಸಂಜೆ 4ರಿಂದ.
12ರಂದು ಭಾಗವತ ಸಂಕೀರ್ತನ ಮತ್ತು ಇತರ ಸಂಗೀತ ಕಾರ್ಯಕ್ರಮ. ವರ್ಷಾ ಚಕ್ರವರ್ತಿ, ನಿವೇತಾ ರಾಮ್, ಯೋಗಕೀರ್ತನಾ, ಸ್ಫೂರ್ತಿ ರಾವ್, ಸುಚೇತನ್ ರಂಗಸ್ವಾಮಿ ಮತ್ತು ತಂಡ. ಬೆಳಿಗ್ಗೆ 8ರಿಂದ.
ಗುರುನಾಮಸ್ಮರಣೆ, ಗುರುಭಿಕ್ಷೆ
ಸದ್ಗುರು ಶ್ರೀಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರ ಬೆಂಗಳೂರು ಭಜನಾ ಮಂಡಳಿಯಿಂದ 23ನೇ ವಾರ್ಷಿಕೋತ್ಸವ 11 ಮತ್ತು 12ರಂದು ನಡೆಯಲಿದೆ.
11ರಂದು– ಪುಣ್ಯಾಹ, ಉದಕ ಶಾಂತಿ, ಮಂಟಪಾರೋಹಣ, ಶ್ರೀ ಗುರು ಕಥಾಮೃತ ಪಾರಾಯಣ ಬೆಳಿಗ್ಗೆ 8.30. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12.30. ಪ್ರವಚನ– ಸ್ವಾಮಿ ನಾರಾಯಣಾನಂದ ಸರಸ್ವತಿ, ಮಧ್ಯಾಹ್ನ 3.30. ಸದ್ಗುರುಗಳ ಪಾದುಕೆಗಳಿಗೆ ಅಡ್ಡಪಲ್ಲಕ್ಕಿ ಉತ್ಸವ, ಸಂಜೆ 5. ನಿತ್ಯಭಜನೆ, ಅಷ್ಟಾವಧಾನ ಸೇವಾ ಆರತಿ, ಸಂಜೆ 6.
12ರಂದು– ಭಜನೆ, ಸೂರ್ಯ ನಮಸ್ಕಾರ, ಶ್ರೀ ಗುರು ಕಥಾಮೃತ ಪಾರಾಯಣ. ಬೆಳಿಗ್ಗೆ 5.30. ಶ್ರೀ ಗುರು
ನಾಮಸ್ಮರಣೆ ಹಾಗೂ ಶ್ರೀ ಗುರುಭಿಕ್ಷೆ. ಬೆಳಿಗ್ಗೆ 11.30ರಿಂದ. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ 12.30ರಿಂದ.
ಸ್ಥಳ: ಶ್ರೀಪಾದ ಶ್ರೀ ವಲ್ಲಭ ಮಂದಿರ, ಶ್ರೀ ದತ್ತಾತ್ರೇಯ ದೇವಸ್ಥಾನ, 3ನೇ ಬ್ಲಾಕ್, ತ್ಯಾಗರಾಜನಗರ.
ಇಗೋ ‘ಮಾಯಾ ದ್ವೀಪ’
ಕಲಾಪ್ರೇಮಿ ಫೌಂಡೇಷನ್ ವತಿಯಿಂದ ‘ನೆನಪು ಕಲ್ಚರಲ್ ಆ್ಯಂಡ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್’ನ ಸದಸ್ಯರು ಅಭಿನಯಿಸುವ ‘ಮಾಯಾ ದ್ವೀಪ’ ನಾಟಕ ಪ್ರದರ್ಶನ 11ರಂದು ನಡೆಯಲಿದೆ. ಮೂಲ: ವಿಲಿಯಂ ಷೇಕ್ಸ್‌ಪಿಯರ್, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ: ಪುನೀತ್ ರಂಗಾಯಣ. ನಿರ್ವಹಣೆ: ದಿಲೀಪ್ ಬಿ.ಎಂ., ಸಂಗೀತ: ಹರಿಪ್ರಸಾದ್. ಸ್ಥಳ: ಸೇವಾ ಸದನ, ಮಲ್ಲೇಶ್ವರಂ. ಸಂಜೆ 6.30ಕ್ಕೆ.
ಸಂಗೀತ ಚಿಕಿತ್ಸೆ
ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್‌ನ ಸ್ಥಾಪಕ ದಿನಾಚರಣೆ ಪ್ರಯುಕ್ತ 11ರಂದು ಸಂಗೀತ ಚಿಕಿತ್ಸೆ ಕುರಿತ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಅತಿಥಿಗಳು: ಡಾ. ಜಯಲಕ್ಷ್ಮಿ ,
ಡಾ. ರೇಖಾ ಶ್ರೀರಾಮಚಂದ್ರ ಮೂರ್ತಿ. ನಂತರ ಯುಗಳ ಗಾಯನ ಕಾರ್ಯಕ್ರಮ ಇರಲಿದೆ. ಪಿಟೀಲು: ವಿದುಷಿ ಸಿ.ಎಸ್.ಉಷಾ, ಮೃದಂಗ: ವಿದುಷಿ ಅನಿರುದ್ಧ್ ವಾಸುದೇವ್. ಸ್ಥಳ: ಶ್ರೀ ರಾಮಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ, ಸಂಜೆ 6.
ಯಕ್ಷಗಾನ ಪ್ರದರ್ಶನ
ತೆಂಕು ಬಡಗಿನ ಬಯಲಾಟ ಮೇಳದ ಆಯ್ದ ಮೇರು ಕಲಾವಿದರ ‘ಯಕ್ಷ ಬಾಂಧವ್ಯ’ ಪ್ರಸ್ತುತಪಡಿಸುವ ‘ಮಾತೆ ಮಂದಾಕಿನಿ’ ಯಕ್ಷಗಾನ ಪ್ರದರ್ಶನವನ್ನು 11ರಂದು ಆಯೋಜಿಸಲಾಗಿದೆ.
ಹಿಮ್ಮೇಳ: ಭಾಗವತರು– ನಗರ ಅಣ್ಣಪ್ಪ ಶೆಟ್ಟಿ, ದೇವಿಪ್ರಸಾದ್ ಆಳ್ವ, ಗಜೇಂದ್ರ ಶೆಟ್ಟಿ ಆಜ್ರಿ, ಮಧುಕರ್ ಹೆಗಡೆ. ಚಂಡೆ– ಶ್ರೀಕಾಂತ್ ಶೆಟ್ಟಿ ಎಡಮೊಗೆ, ಪನ್ನಗ ಮಯ್ಯ. ಮದ್ದಳೆ– ಶ್ರೀಧರ್ ಭಂಡಾರಿ, ಅಕ್ಷಯ್ ಕುಮಾರ್ ವಿಟ್ಲ.
ಮುಮ್ಮೇಳ: ಸ್ತ್ರೀವೇಷದಲ್ಲಿ: ಗೋವಿಂದ ವಂಡಾರು, ಮಹೇಶ್ ಸಾಣೂರು, ಮನೋಹರ್ ಕುಮಾರ್, ವಸಂತ್ ನಾಯಕ್ ಚಿಕ್ಕೋಳ್ಳಿ. ಹಾಸ್ಯ: ಸತೀಶ್ ಹಟ್ಟಿಯಂಗಡಿ, ಸೂರಾಗ್ ಹೇರೂರು. ರಂಗದಲ್ಲಿ: ಸುಧಾಕರ್ ಉಪ್ಪುಂದ, ರಾಜೇಶ್ ಬಂಡಾರಿ ಗುಣವಂತೆ, ರವಿ ಕೊಂಡ್ಲಿ, ಭರತ್ ಪರ್ಕಳ, ಸುಬ್ರಹ್ಮಣ್ಯ ಕೋಣಿ, ದಿನೇಶ್ ಕನ್ನಾರ್, ಸುಧಾಕರ್ ನಾಯಕ್, ಸತೀಶ್ ನಾಯಕ್, ಸಂಪತ್ ಕನ್ನತ್ ಕುಡೇರಿ, ಪ್ರಣುತ್ ಗಾಣಿಗ, ಪ್ರದೀಪ್, ಅನೂಪ್ ನಾಯಕ್, ಪ್ರಸಾದ್ ಮಂದಾರ್ತಿ, ಸಚಿನ್ ನೈಕಂಬ್ಳಿ, ಕೌಸ್ತುಭ ಉಡುಪ. ಸ್ಥಳ: ರವೀಂದ್ರ ಕಲಾಕ್ಷೇತ್ರ, ರಾತ್ರಿ 10ರಿಂದ.
ಕಲಾವಿದೆಯ ಪಿಸುಮಾತು
ಆರ್ಟೆಲಾ ಅರ್ಪಿಸುವ, ಕಲಾವಿದೆ ಸಯೀದಾ ಅಲಿ ಅವರ ‘ವಿಸ್ಪರ್ಸ್ ಆಫ್ ದಿ ಸೋಲ್’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು 11ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಅತಿಥಿಗಳು: ಎಸ್.ಜಿ.ವಾಸುದೇವ್, ನಳಿನಿ ಮಾಳವೀಯ, ದರ್ಶನ್ ಕುಮಾರ್ ವೈ.ಯು.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಗ್ಯಾಲರಿ ನಂ. 1 ಮತ್ತು 2, ಕುಮಾರಕೃಪಾ ರಸ್ತೆ. ಪ್ರದರ್ಶನವು 19ರವರೆಗೆ ಇರಲಿದೆ. ಪ್ರದರ್ಶನದ ಸಮಯ: ಬೆಳಿಗ್ಗೆ 10ರಿಂದ ಸಂಜೆ 6.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.