ADVERTISEMENT

ದಂಡ ಪಾವತಿ ರಿಯಾಯಿತಿ: ₹2.65 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 19:12 IST
Last Updated 28 ಆಗಸ್ಟ್ 2025, 19:12 IST
 ದಂಡ ಪಾವತಿ
ದಂಡ ಪಾವತಿ   

‌ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿರುವ ವಾಹನಗಳ ಮೇಲಿನ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಿರುವ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು, ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರಿಗೆ ವಂಚನೆ ಮಾಡಿದ್ದಾರೆ. 

ಟೆಲಿಕಾಂ ಲೇಔಟ್‌ನ 50 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ಮುರುಳಿ ಮೋಹನ್ ಅವರು ರಿಯಾಯಿತಿ ದರದಲ್ಲಿ ವಾಹನದ ಮೇಲಿನ ದಂಡ ಪಾವತಿಗೆ ಆನ್‌ಲೈನ್ ಹುಡುಕಾಟ ನಡೆಸುತ್ತಿರುವ ವೇಳೆ ಸಹಾಯಕರ ರೂಪದಲ್ಲಿ ಅವರ ವಾಟ್ಸ್‌ಆ್ಯಪ್‌ಗೆ ‘ಎಪಿಕೆ’ ಹೆಸರಿನ ನಕಲಿ ಲಿಂಕ್ ಕಳುಹಿಸಿ ₹2.65 ಲಕ್ಷ ವಂಚನೆ ಮಾಡಿದ್ದಾರೆ.

ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಮುರುಳಿ ಅವರು ತಮ್ಮ ವಾಹನದ ಮೇಲಿನ ದಂಡ ಪಾವತಿಗೆ ಪೊಲೀಸ್ ಇಲಾಖೆ ವೆಬ್‌ಸೈಟ್ ಹುಡುಕುತ್ತಿದ್ದ ವೇಳೆ ಅಪರಿಚಿತ ಸಂಖ್ಯೆಯಿಂದ ನಕಲಿ ಲಿಂಕ್ ಬಂದಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಮೊಬೈಲ್ ಹ್ಯಾಕ್ ಆಗಿದೆ. ಕೆಲ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಲ್ಲಿರುವ ₹2,65,979 ವಂಚಕರು ದೋಚಿದ್ದಾರೆ.

ADVERTISEMENT

ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.