ADVERTISEMENT

ಸೈಕಲ್‌ ಲೆಕ್ಕ ತೆಗೆಯುವ ಹೊಣೆಯೂ ಶಿಕ್ಷಕರಿಗೆ!

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:28 IST
Last Updated 29 ಜೂನ್ 2019, 19:28 IST
   

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸೈಕಲ್‌ಗಳನ್ನು ಲೆಕ್ಕ ತೆಗೆಯುವ ಹೊಣೆಯೂ ಶಿಕ್ಷಕರ ಮೇಲೆ ಬಿದ್ದಿದೆ.

‘ಜುಲೈ ತಿಂಗಳಿನಿಂದ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ವಾರಕ್ಕೆ ಎರಡು ಬಾರಿ ಸೈಕಲ್‌ಗಳ ಲೆಕ್ಕ ತೆಗೆಯಬೇಕು. ಒಂದು ವೇಳೆ ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯಲ್ಲಿ ಇಲ್ಲದಿದ್ದರೆ ಮುಖ್ಯಾಧ್ಯಾಪಕರು ಒಬ್ಬ ಶಿಕ್ಷಕರಿಗೆ ಈ ಹೊಣೆ ನೀಡಬಹುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸುತ್ತೋಲೆಯೊಂದರಲ್ಲಿ ತಿಳಿಸಲಾಗಿದೆ.

ಮಕ್ಕಳಿಗೆ ನೀಡಲಾದ ಸೈಕಲ್‌ಗಳ ದುರ್ಬಳಕೆ ಆಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ADVERTISEMENT

‘ಶಾಲೆಗೆ ನೀಡಲಾದ ಒಟ್ಟು ಸೈಕಲ್‌ ಮತ್ತು ಆಯಾ ದಿನ ಶಾಲೆಗೆಹಾಜರಾದ ಮಕ್ಕಳ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಶನಿವಾರ ಮತ್ತು ಸೋಮವಾರ ಈ ಹಾಜರಾತಿ ತೆಗೆದುಕೊಳ್ಳಲಾಗುವುದು. ಸೈಕಲ್ ದುರ್ಬಳಕೆ ತಡೆಯಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದುಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.