
ದಾಬಸ್ ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ- ನೆಲಮಂಗಲ ವತಿಯಿಂದ ಸಾರ್ವಜನಿಕರ ಆಲಿಕೆ ಮತ್ತು ಪ್ರತಿಕ್ರಿಯೆ ಸಭೆಗೆ ಜನರು ಬಾರದಿದ್ದರಿಂದ ಸಭೆಯನ್ನು ಮೊಟಕುಗೊಳಿಸಲಾಯಿತು.
ಮುಂದಿನ ಸಭೆಯನ್ನು ಜನವರಿ 31ಕ್ಕೆ ನಿಗದಿಗೊಳಿಸಲಾಗಿದೆ. ಸೋಂಪುರ ಕೈಗಾರಿಕಾ ಪ್ರದೇಶದ ಗೆದ್ದಲಹಳ್ಳಿ, ಮಾಚನಹಳ್ಳಿ ಮತ್ತು ಗೊಟ್ಟಿಗೆರೆ ಗ್ರಾಮಗಳ 520.75 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಮಾಡಿಕೊಂಡಿದ್ದು, ಅದನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಆ ವೇಳೆ ಪರಿಸರ ಮಾಲಿನ್ಯ ಉಂಟಾಗಬಹುದಾ ಅನ್ನುವ ಸಾರ್ವಜನಿಕ ಆಲಿಕೆ ಹಾಗೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವ ಕುರಿತು ಏರ್ಪಡಿಸಿದ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದೇ ಸಭೆ ಮುಂದೂಡಲಾಯಿತು.
‘ಸಾರ್ವಜನಿಕ ಸಭೆಯ ಬಗ್ಗೆ ದಿನ ಪತ್ರಿಕೆಯಲ್ಲಿ ಪ್ರಚಾರ ಮಾಡಿರುವುದಾಗಿ ಹೇಳಿದ ಮಾಲಿನ್ಯ ನಿಯಂತ್ರಣ ಅಧಿಕಾರಿ ಹೇಳುತ್ತಾರೆ. ಆದರೆ ಬೇರೆ ಯಾವುದೇ ರೀತಿಯಲ್ಲೂ ಇಲ್ಲಿನ ಗ್ರಾಮಗಳ ಜನರಿಗೆ ಮಾಹಿತಿ ನೀಡಿಲ್ಲ. ಇದರಿಂದಲೇ ಜನ ಸೇರಿಲ್ಲ. ಅಧಿಕಾರಿಗಳ ನಿರ್ಲಕ್ಷ ಸಭೆ ಮುಂದೂಡಲು ಕಾರಣ’ ಎಂಬ ಆರೋಪ ಕೇಳಿ ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.